


ತೆಂಕಕಾರಂದೂರು: ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿ ಮತ್ತು ಡಾ| ಸೌಮ್ಯ ಹಾಗೂ ಮನೆಯವರು, ಅಂಗಡಿಬೆಟ್ಟು ಇವರ ವತಿಯಿಂದ ಫೆ.2 ಗುರುವಾರದಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆವರಣದಲ್ಲಿ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮ ಜರಗಲಿದೆ.
ಸಂಜೆ ಗಂಟೆ 6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಕೆ. ಕೃಷ್ಣ ಸಂಪಿಗೆತ್ತಾಯ ಆಡಳಿತ ಮೊಕ್ತೇಸರರು ವಿಷ್ಣುಮೂರ್ತಿ ದೇವಸ್ಥಾನ, ತೆಂಕಕಾರಂದೂರ, ದಿನೇಶ್ ಅಮೀನ್ ಮಟ್ಟು ,ಹಿರಿಯ ಪತ್ರಕರ್ತರು ಹಾಗೂ ಚಿಂತಕರು, ಬೆಂಗಳೂರು, ಕೆ. ಯೋಗೀಶ್ ಕುಮಾರ್, ನಡಕ್ಕರ, ಅಧ್ಯಕ್ಷರು, ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿ, ಡಾ| ಅಣ್ಣಯ್ಯ ಕುಲಾಲ್, ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ವಿಜೇತರು, ಯತೀಶ್ ಬೈಕಂಪಾಡಿ, ಕ್ಯಾಂಪಸ್ ನಿರ್ದೇಶಕರು ಅಮೃತ ವಿದ್ಯಾಲಯಂ, ಮಂಗಳೂರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ 7.30ಕ್ಕೆ ಕಲಾ ಸಂಗಮ ಮಂಗಳೂರು ಇವರಿಂದ ವಿಜಯ ಕುಮಾರ್, ಕೊಡಿಯಾಲ್‌ಬೈಲು ಇವರ ನಿರ್ದೇಶನದಲ್ಲಿ ಸ್ವರಾಜ್ ಶೆಟ್ಟಿ ಅಭಿನಯದ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.