ಜಿಲ್ಲಾಮಟ್ಟದ ಯುವಜನ ಮೇಳ ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿಗೆ ಸಮಗ್ರ ಪ್ರಶಸ್ತಿ

0

ಬೆಳ್ತಂಗಡಿ : ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ ನಗರ ಪಂಚಾಯತ್, ದ.ಕ. ಜಿಲ್ಲಾ ಯುವಜನ ಒಕ್ಕೂಟ ಇವರ ಆಶ್ರಯದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರ ಆತಿಥ್ಯದಲ್ಲಿ ಸುಳ್ಯದ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ರಂಗಮಂದಿರದಲ್ಲಿ ಎರಡು ದಿನಗಳ ಜಿಲ್ಲಾ ಯುವಜನ ಮೇಳ ಜನವರಿ 21-22 ರಂದು ನಡೆಯಿತು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಲವಾರು ಯುವಕ ಯುವತಿ ಮಂಡಲುಗಳು ಭಾಗವಹಿಸಿದ್ದು ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ ತಂಡವು ಯುವಕ ಮತ್ತು ಯುವತಿ ಮಂಡಲ ಎರಡರಲ್ಲು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಯುವತಿಯರ ವಿಭಾಗದಲ್ಲಿ ಕನ್ನಡ ಭಾವಗೀತೆ ಮತ್ತು ರಂಗಗೀತೆಯಲ್ಲಿ ಸೌಜನ್ಯ ಭಟ್ ದ್ವಿತೀಯ ಮತ್ತು ಪ್ರಥಮ ಸ್ಥಾನ, ತುಳು ಭಾವಗೀತೆ ಜಯಶ್ರೀ ಪ್ರಥಮ, ಏಕಪಾತ್ರಾಭಿನಯದಲ್ಲಿ ಸುಕನ್ಯ ದ್ವಿತೀಯ, ಲಾವಣಿಯಲ್ಲಿ ಸೌಜನ್ಯ ದ್ವಿತೀಯ ಹಾಗೂ ಶಾಲಿನಿ ಗೇರುಕಟ್ಟೆ ತೃತೀಯ, ಗುಂಪು ಸ್ಪರ್ಧೆಯಲ್ಲಿ ಜನಪದ ಗೀತೆ ಪ್ರಥಮ, ಗೀಗೀ ಪದ ದ್ವಿತೀಯ, ಭಜನೆ ತೃತೀಯ, ಸೋಬಾನೆ ಪದ ದ್ವಿತೀಯ, ರಾಗಿ ಬೀಸುವ ಪದ ತೃತೀಯ ಸ್ಥಾನ ಪಡೆದುಕೊಂಡು ಅಧಿಕ ಅಂಕ ಗಳಿಸಿ ಯುವತಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನ ತಂಡ ಪಡೆದುಕೊಂಡಿದೆ. ಅದೇ ರೀತಿ ಯುವಕರ ವಿಭಾಗದಲ್ಲಿ ಕನ್ನಡ ಭಾವಗೀತೆ ಮತ್ತು ತುಳು ಭಾವಗೀತೆಯಲ್ಲಿ ಶಿವಶಂಕರ್ ಗೇರುಕಟ್ಟೆ ತೃತೀಯ ಮತ್ತು ಪ್ರಥಮ‌ ಸ್ಥಾನ, ಲಾವಣಿಯಲ್ಲಿ ಚಂದ್ರಹಾಸ ಬಳಂಜ ದ್ವಿತೀಯ, ಏಕಪಾತ್ರಾಭಿನಯ ಶ್ಯಾಮ್ ಪ್ರಸಾದ್ ಪ್ರಥಮ, ಗುಂಪು ಸ್ಪರ್ಧೆಯಲ್ಲಿ ಭಜನೆ ದ್ವಿತೀಯ, ಗೀಗೀ ಪದ ದ್ವಿತೀಯ, ಕೋಲಾಟ ತೃತೀಯ ಸ್ಥಾನ ಪಡೆದುಕೊಂಡಿದೆ.

ತಂಡದಲ್ಲಿ ಸೌಜನ್ಯ ಭಟ್, ಲಿಖಿತಾ, ಶಾಲಿನಿ‌ ಗೇರುಕಟ್ಟೆ, ಜಯಶ್ರೀ, ವಾಣಿ, ಪಲ್ಲವಿ, ಸುಕನ್ಯ, ರಮ್ಯಾ, ಚೈತ್ರ, ದೀಕ್ಷಾ, ದೀಪ್ತಿ, ತೃಷಾ, ಸನ್ನಿಧಿ, ಲಾವಣ್ಯ, ಸ್ವಾತಿ,‌ಧನ್ವಿ, ಸುಜ್ಙಾ ಹಾಗೂ ತಂಡದ ಅಧ್ಯಕ್ಷರಾದ ಸ್ಮಿತೇಶ್ ಬಾರ್ಯ, ಕಾರ್ಯದರ್ಶಿ ಚಂದ್ರಹಾಸ ಬಳಂಜ, ಕೋಶಾಧಿಕಾರಿ ಸುಧೀರ್ ಜೈನ್, ಸಂದೀಪ್ ಬಳಂಜ, ಅನಿತ್, ಸದಾಶಿವ, ಶೈಲೇಶ್, ಯಶೋಧರ, ಸಚಿನ್, ಶಿವಶಂಕರ್ ಗೇರುಕಟ್ಟೆ, ಶ್ಯಾಮ್ ಪ್ರಸಾದ್ ಭಾಗವಹಿಸಿದ್ದು ತಂಡದ ಸ್ಥಾಪಕಾಧ್ಯಕ್ಷರಾದ ರಮಾನಂದ ಸಾಲ್ಯಾನ್ ಮುಂಡೂರು, ಸಲಹೆಗಾರರಾದ ಸುಧಾಮಣಿ ಆರ್, ಜಗದೀಶ್ ಸಹಕರಿಸಿದರು.

LEAVE A REPLY

Please enter your comment!
Please enter your name here