ತೆಂಕಕಾರಂದೂರು:ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

0

ತೆಂಕಕಾರಂದೂರು: ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಕ್ಷೇತ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದರು

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ಕೃಷ್ಣ ಸಂಪಿಗೆತ್ತಾಯ ಮತ್ತು ಜಾತ್ರಾ ಸಮಿತಿ ಪದಾಧಿಕಾರಿಗಳು ಶಾಸಕರನ್ನು ಬರಮಾಡಿಕೊಂಡು ಪ್ರಸಾದ ನೀಡಿ, ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಸೇವಾಕರ್ತರಾದ ಡಾ. ಸದಾನಂದ ಪೂಜಾರಿ ಮತ್ತು ಡಾ.ಸೌಮ್ಯ ಸದಾನಂದ ಪೂಜಾರಿ, ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್, ಜಾತ್ರಾ ಸಮಿತಿ ಅಧ್ಯಕ್ಷ ಜಗದೀಶ್ ಕಜೆಬೆಟ್ಟು, ಕಾರ್ಯದರ್ಶಿ ವಿದ್ಯಾನಂದ ಅಂಗಡಿಬೆಟ್ಟು, ಜಾತ್ರಾ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ ಮಾರುತಿ ನಿಲಯ, ರಾಜೀವ ಸಾಲಿಯಾನ್ ಮುಂಡೂರು, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಶ್ರೀನಿವಾಸ್ ರೈ ಕಾರಂದೂರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here