ಪಜಿರಡ್ಕ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆಯುವ ಕುರಿತು ಮಹೇಶ್ ಶೆಟ್ಟಿ ತಿಮರೋಡಿಯವರ ಆರೋಪ ಸತ್ಯಕ್ಕೆ ದೂರ: ಸಮಿತಿ ಸ್ಪಷ್ಟನೆ

0

ಪತ್ರಿಕಾ ಗೋಷ್ಠಿ

ಬೆಳ್ತಂಗಡಿ : ಕಲ್ಮಂಜ ಗ್ರಾಮದ ಶ್ರೀ ಸಂಗಮ ಕ್ಷೇತ್ರ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ಕ್ಷೇತ್ರಕ್ಕೆ ಜ.22 ರಂದು ಆಗಮಿಸಿದ್ದ ಮಹೇಶ ಶೆಟ್ಟಿ ತಿಮರೋಡಿಯವರು ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು ಮುಂತಾದ ಗಣ್ಯರ ವಿಚಾರವಾಗಿ ಅನಪೇಕ್ಷಿತ ವಿಚಾರಗಳನ್ನು ಮಾತನಾಡಿರುವ ವಿಚಾರಗಳು ನಿರಾಧಾರವಾಗಿರುತ್ತದೆ ಎಂದು ವ್ಯವಸ್ಥಾಪನಾ ಸಮಿತಿ ಬ್ರಹ್ಮಕಲಶೋತ್ಸವ ಸಮಿತಿ, ಊರವರ ಪರವಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ತುಕಾರಾಮ ಸಾಲಿಯಾನ್ ಮತ್ತು ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಹೇಳಿದರು. ಇವರು ಜ.25 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಅಂಗವಾಗಿ ಜರುಗಿದ ಕಲ್ಮಂಜ ಗ್ರಾಮಸ್ಥರ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಶಾಸಕರನ್ನು ಭೇಟಿಯಾಗಿ ಗ್ರಾಮ ಸಭೆಯನ್ನು ಕ್ಷೇತ್ರದಲ್ಲಿ ಕರೆದು ಈ ಸಭೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚಿಸುವ ಸಂದರ್ಭದಲ್ಲಿ ಊರವರ ಅಭಿಪ್ರಾಯದಂತೆ ಶಾಸಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಶಾಸಕರು ತನ್ನ ಕೆಲಸದ ಒತ್ತಡದ ಮಧ್ಯದಲ್ಲಿ ನಿಮ್ಮ ಜೊತೆ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಲು ಅನಾನುಕೂಲತೆ ಆಗುತ್ತದೆ. ಆದುದರಿಂದ ನನಗೆ ಹುದ್ದೆ ಬೇಡ, ನಿಮ್ಮ ಜೊತೆ ನಾನು ಇದ್ದೇನೆ ಎನ್ನುವ ಮಾತುಗಳನ್ನು ಹೇಳಿರುತ್ತಾರೆ. ಅದಾಗ್ಯೂ ಊರವರ ಒತ್ತಾಸೆಯ ಮೇರೆಗೆ ಅಧ್ಯಕ್ಷರಾಗಲು ಒಪ್ಪಿರುತ್ತಾರೆ. ಆದುದರಿಂದ ಶಾಸಕರು ತಾವೇ ಸ್ವತ: ಮುತುವರ್ಜಿಯಿಂದ ಬ್ರಹ್ಮಕಲಶೋತ್ಸವದ ಸಮಿತಿ ಅಧ್ಯಕ್ಷರಾಗಿರುವುದಿಲ್ಲ.
ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಸಾಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸರಣಿ ಸಮಾಲೋಚನಾ ಸಭೆಗಳನ್ನು ನಡೆಸಿ ಅತಿಥಿಗಳನ್ನು ಕರೆಯುವ ಕುರಿತು ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ತಿಮರೋಡಿಯವರು ತಿಳಿಸಿದಂತೆ ಎಲ್ಲಿಯೂ ಅವರ ಹಾಗೂ ರಕ್ಷಿತ್‌ ಶಿವರಾಂರವರ ಹೆಸರುಗಳು ಸಭೆಯಲ್ಲಿ ಪ್ರಸ್ತಾಪ ಆಗಿರುವುದಿಲ್ಲ. ಅವರ ಆರೋಪ ನಿರಾಧಾರವಾಗಿರುತ್ತದೆ. ಕ್ಷೇತ್ರದಲ್ಲಿ ಅಭಿವೃದ್ಧಿಗಳಿಗೆ ಪೂರಕವಾಗಿ ಹಿಂದಿನ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿದ್ದು ಈ ಬಾರಿಯೂ ರೂ.10 ಲಕ್ಷ ದೇಣಿಗೆ ನೀಡಿ ಸರ್ವ ರೀತಿಯ ಸಹಕಾರ ನೀಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಊರವರ ಪರವಾಗಿ ಖಂಡಿಸುತ್ತೇವೆ.

ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಕ್ಷೇತ್ರದಲ್ಲಿ ಪ್ರಸ್ತಾಪಿಸಿ ಸಮಾಜದಲ್ಲಿ ಕ್ಷೇತ್ರದ ಬಗ್ಗೆ ತಪ್ಪು ಕಲ್ಪನೆ ಉಂಟು ಮಾಡುತ್ತಿರುವುದು ಹಾಗೂ ಕ್ಷೇತ್ರದ ವ್ಯವಸ್ಥೆಯ ತೇಜೋವಧೆಗೆ ಪ್ರಯತ್ನಿಸುತ್ತಿರುವುದು ಖಂಡನೀಯ ಹಾಗೂ ನಿರಾಧರ ಎಂದರು. ಶಾಸಕರು ಕಲ್ಮಂಜ ಗ್ರಾಮದ ಅಭಿವೃದ್ಧಿಗೆ ಡಾಮಾರೀಕರಣಕ್ಕೆ ಹಾಗೂ 3 ಭಾಗದ ಸಂಪರ್ಕ ಮಾಡುವ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿ ಸಹಕಾರ ನೀಡಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಪಾಂಡುರಂಗ ಕಾಕತ್ಕರ್, ಉಪಾಧ್ಯಕ್ಷರುಗಳಾದ ಶ್ರೀನಿವಾಸ ರಾವ್, ಕೃಷ್ಣಪ್ಪ ಪೂಜಾರಿ ನಿಡಿಗಲ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here