ಮರೋಡಿ: ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವಷಾವಧಿ ನೇಮೋತ್ಸವವು ಜ 22ರಿಂದ 23 ರ ವರೆಗೆ ನಡೆಯಲಿದೆ.
ಜ.22 ಸಂಜೆ ಗಂಟೆ 5-೦೦ಕ್ಕೆ ಗುಡ್ಡನ್‌ಬೆಟ್ಟು ಗುತ್ತುವಿನಿಂದ ಕೊಡಮಣಿತ್ತಾಯ ಭಂಡಾರ, ಗುಂಡಾವು ಮನೆಯಿಂದ ದೈವದ ಭಂಡಾರ ಹಾಗೂ ಪಚ್ಚಾಡಿ ತಾವಿನಿಂದ ಬ್ರಹ್ಮಬೈದರ್ಕಳ ದೈವದ ಭಂಡಾರ ಬರುವುದು. ರಾತ್ರಿ ಗಂಟೆ 7-೦೦ರಿಂದ ಭಜನಾ ಕಾರ್ಯಕ್ರಮ , ರಾತ್ರಿ ಗಂಟೆ 9-೦೦ರಿಂದ ಶ್ರೀ ದೈವದ ನೇಮ. ರಾತ್ರಿ ಗಂಟೆ 11-೦೦ರಿಂದ ಕೊಡಮಣಿತ್ತಾಯ ನೇಮೋತ್ಸವ.
ಜ. 23 ಸಂಜೆ ಗಂಟೆ 7-೦೦ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ. ರಾತ್ರಿ ಗಂಟೆ 8-೦೦ರಿಂದ ಸಭಾ ಕಾರ್ಯಕ್ರಮ. ರಾತ್ರಿ ಗಂಟೆ 9.30ರಿಂದ ಬ್ರಹ್ಮಬೈದರ್ಕಳ ನೇಮೋತ್ಸವ. ರಾತ್ರಿ ಗಂಟೆ 1-೦೦ರಿಂದ ಮಾಯಾಂದಲೆ ನೇಮೋತ್ಸವ.
ಜ.24 ಬೆಳಿಗ್ಗೆ ಗಂಟೆ 6-೦೦ರಿಂದ ಮಜ್ಜಾರಾಯ ದೈವದ ನೇಮೋತ್ಸವ ನಡೆಯಲಿದೆ.
ಜ.23 ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಮಿರಾಜ್ ಪಾಂಡಿ ಗುಡ್ಡನ್‌ಬೆಟ್ಟು ಗುತ್ತು ಮರೋಡಿ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಉದ್ಯಮಿ ದೇವೇಂದ್ರ ಹೆಗ್ಡೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಜಯಂತ ಕೋಟ್ಯಾನ್ , ಗ್ರಾ.ಪಂ ಅಧ್ಯಕ್ಷೆ ಪದ್ಮಶ್ರೀ ಜೈನ್ ಭಾಗವಹಿಸಲಿದ್ದಾರೆ ಎಂದು ಗರಡಿ ಜಾತ್ರಾ ಸಮಿತಿ ಅಧ್ಯಕ್ಷ ದಾಮೋದರ ಪೂಜಾರಿ ಹಾಗೂ ಮಾಜಿ ಅಧ್ಯಕ್ಷ ರತ್ನಾಕರ ಬುಣ್ಣಣ್ ತಿಳಿಸಿದ್ದಾರೆ.