ಜ.20: ಮಾವಿನಕಟ್ಟೆ ಶಾಲಾ ರಜತ ಮಹೋತ್ಸವ

0

ಮಾವಿನಕಟ್ಟೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ.ಜಿ.ಪಂ. ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾವಿನಕಟ್ಟೆಯ ರಜತ ಮಹೋತ್ಸವವು ಜ 20 ರಂದು ನಡೆಯಲಿದೆ.

ಬೆಳಿಗ್ಗೆ ಧ್ವಜಾರೋಹಣ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ಗೌರವಾರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 8 ರಿಂದ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಳೆವಿದ್ಯಾರ್ಥಿಗಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಳೆವಿದ್ಯಾರ್ಥಿಸಂಘದ ಸಹಭಾಗಿತ್ವದಲ್ಲಿ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ ವಾರ್ಡ್ ನಂಬರ್-2 ನಡೆಯಲಿದೆ ಎಂದು ಅಧ್ಯಕ್ಷ ಶುಭರಾಜ್ ಹೆಗ್ಡೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here