ರಾಮಕೃಷ್ಣ ಭಟ್ ಚೊಕ್ಕಾಡಿರವರಿಗೆ ಅನಿತಾ ಕೌಲ್ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ

0

ಬೆಳಾಲು : ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ಸಲ್ಲಿಸುತ್ತಿರುವ ರಾಮಕೃಷ್ಣ ಭಟ್ ಚೊಕ್ಕಾಡಿ ಇವರು ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯವರು ಕೊಡಮಾಡುವ 2022ನೇ ಸಾಲಿನ, ರಾಜ್ಯ ಮಟ್ಟದ, ಅನಿತಾ ಕೌಲ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತಿ, ಬರಹಗಾರ, ಉತ್ತಮ ಸಂಘಟಕರೂ ಆಗಿರುವ ಇವರು ಕ್ರಿಯಾಶೀಲ ಬೋಧನೆಯ ಜೊತೆಗೆ ತನ್ನ ಶಾಲೆಯಲ್ಲಿ ಕಲಾ ಗ್ಯಾಲರಿಯೊಂದಿಗೆ, ಜಲ ಮರುಪೂರಣದಂತಹ ವಿಶೇಷ ಪ್ರಯೋಗಗಳನ್ನು ನಡೆಸಿದವರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಅನಿತಾ ಕೌಲ್ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಲ್ಲಿ ಓರ್ವರು ಇವರಾಗಿದ್ದಾರೆ.
ಫೆ. 22 ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಸಮಾರಂಭದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here