


ಬೆಳ್ತಂಗಡಿ: ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಇದರ ಬೆಳ್ತಂಗಡಿ ಘಟಕದ ವತಿಯಿಂದ ಘಟಕದ ಹಿರಿಯ ಸದಸ್ಯೆ, ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಡಾ. ಗಂಗಾಧರ ಶೇಖ ಅವರ ಧರ್ಮಪತ್ನಿ ಉಮಾ ಜಿ ಶೇಖ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷತೆಯನ್ನು ಡಾ. ದೇವಿಪ್ರಸಾದ್ ಬೊಳ್ಮ ವಹಿಸಿದ್ದರು.
ಉಮಾ ಜಿ ಶೇಖ ಅವರ ಬಗ್ಗೆ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ರಾಮಕೃಷ್ಣ ಗೌಡ, ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಅವರು ಮೃತರಿಗೆ ಲಯನ್ಸ್ ಪರವಾಗಿ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ತುಕಾರಾಮ ಬಿ, ಕೋಶಾಧಿಕಾರಿ ಪಂಚಾಕ್ಷರಪ್ಪ ಹಾಗೂ ಸದಸ್ಯರುಗಳು ಭಾಗಿಯಾಗಿದ್ದರು.
ಉಮಾ ಜಿ ಶೇಖ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮರಣೋತ್ತರ ಗೌರವ ಸಲ್ಲಿಸಲಾಯಿತು.