ಮಡಂತ್ಯಾರು : ಪಾರೆಂಕಿ ಗ್ರಾಮದ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಪಂಚಮದಶ ಪ್ರತಿಷ್ಠಾ ಉತ್ಸವ ಮತ್ತು ಪರಿವಾರ ದೈವಗಳ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಜ.8 ರಂದು ಜರಗಿತು. ಬೆಳಿಗ್ಗೆ ಸಾಮೂಹಿಕ ದೇವರ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ, ನವಕ ಕಳಶಾಭಿಷೇಕ, ವಿಶೇಷ ಸರ್ವ ಅಲಂಕಾರದ ವಿಶೇಷ ಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮೂಡಯೂರು ಗುತ್ತಿನಿಂದ ಪರಿವಾರ ದೈವಗಳ ಭಂಡಾರ ಮೆರವಣಿಗೆಯಲ್ಲಿ ಆಗಮಿಸಿ ದೈವಗಳ ನೇಮೋತ್ಸವ, ದರ್ಶನ ಸೇವೆ, ದೈವ ದೇವರುಗಳ ಭೇಟಿ ನಡೆಯಿತು.
ವೇದಿಕೆಯಲ್ಲಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಾಂಬೂಲ ಕಲಾವಿದರಿಂದ ಪರಿಮಲ ಕಲನಿ ನಾಟಕ ನಡೆಯಿತು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ ಸನತ್ ಕುಮಾರ್ ಪಡಿವಾಳ್, ಮೂಡಯೂರು ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ಖಜಾಂಚಿ ಡಾ| ಕೆ ಎಸ್ ಬಲ್ಲಾಲ್ ,ಪ್ರಧಾನ ಅರ್ಚಕರಾದ ಟಿ. ವಿ ಶ್ರೀಧರ್ ರಾವ್, ಅರ್ಚಕ ರಮೇಶ್, ಯೋಗೀಶ್ ಹೆಗ್ಡೆ , ಜಾತ್ರಾ ಸಮಿತಿ ಸದಸ್ಯರಾದ ಸುಧೀರ್ ಪಡಿವಾಳ್ ಬಾಲಚಂದ್ರ ಹೆಗ್ಡೆ, ರತ್ನಕರ್ ಶೆಟ್ಟಿ, ನವೀನ್ ಪಿ ಯಾದವ್, ಲೋಕೇಶ್ ಆಚಾರ್ಯ, ಜಯಂತ ಶೆಟ್ಟಿ, ಕಾಂತಪ್ಪಗೌಡ, ಪ್ರವೀಣ್ ಕುಮಾರ್, ಸುಂದರ ಪೂಜಾರಿ, ಜಾತ್ರಾ ಉಪ ಸಮಿತಿಯ ಸದಸ್ಯರಾದ ಗಂಗಾಧರ ಭಂಡಾರಿ, ಬಾಬು ಆಚಾರ್ಯ, ಸುಂದರ ಮೂಲ್ಯ, ಆನಂದ ಮೂಲ್ಯ, ಸತೀಶ್ ಮೂಲ್ಯ, ದಿನೇಶ್ ಮೂಲ್ಯ, ಮೋಹನ ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.