ಜನಾಂದೋಲನಾಗಳ ಮಹಾಮೈತ್ರಿ ನೇತೃತ್ವದಲ್ಲಿ, ಸಂಯುಕ್ತ ಹೋರಾಟ-ಕರ್ನಾಟಕದ ಸಹಕಾರದೊಂದಿಗೆ ಭಾವೈಕ್ಯತಾ ಜಾಥಾ

0

ಬೆಳ್ತಂಗಡಿ: ಜನಾಂದೋಲನಾಗಳ ಮಹಾಮೈತ್ರಿ ನೇತೃತ್ವದಲ್ಲಿ, ಸಂಯುಕ್ತ ಹೋರಾಟ-ಕರ್ನಾಟಕದ ಸಹಕಾರದೊಂದಿಗೆ ಮತ್ತು ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಭಾವೈಕ್ಯತಾ ಜಾಥಾ-2023 ಮಂಗಳೂರಿನಿಂದ-ಬೆಂಗಳೂರಿಗೆ ಜ. 6 ರಿಂದ ಜ. 11 ರ ರವರೆಗೆ ನಡೆಯಲಿದೆ.

ಜಾಥಾದ ಉದ್ದೇಶ ಹಾಗೂ ಹಕ್ಕೊತ್ತಾಯಗಳು :

ರಾಜ್ಯ ಸರಕಾರವು ತಂದಿರುವ ಮೂರು ಕರಾಳ ಕಾಯ್ದೆಗಳಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಮ್.ಸಿ. ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಹಿಂಪಡೆಯಬೇಕು ಈ ಕಾಯ್ದೆಯಿಂದಾಗಿ ಉಪಕಸುಬುದಾರರ ನಿರುದ್ಯೋಗವು ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ MRPL ಸೇರಿದಂತೆ ಎಲ್ಲಾ ಸಂಸ್ಥೆಗಳು ಆದ್ಯತೆ ಮೇರೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು.
ದಲಿತರ ಮೇಲಿನ ಹಲ್ಲೆ ಮತ್ತು ಸ್ಪ್ರಶ್ಯತೆಯ ಆಚರಣೆಯನ್ನು ಕಠಿಣ ಕ್ರಮಗಳಿಂದ ನಿಯಂತ್ರಿಸಬೇಕು.
ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೆ ಕಾದಿರಿಸಿದ ಡಿ.ಸಿ. ಮನ್ನಾ ಜಮೀನನ್ನು ಫಲಾನುಭವಿಗಳಿಗೆ ತಕ್ಷಣ ಹಂಚಿಕೆ ಮಾಡಬೇಕು.
ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನವನ್ನು ಪಠ್ಯವಾಗಿ ಭೋಧಿಸಬೇಕು. ಮೊದಲಾದ ಬೇಡಿಕೆಗಳನ್ನು ಒತ್ತಾಯಿಸಿ ಜಾಥಾ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಶಿವಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ರವಿಕುಮಾರ್ ಪುಣಚ, ತಾಲೂಕು ಕಾರ್ಮಿಕ ಮುಖಂಡ ಬಿ.ಎಮ್ ಭಟ್, ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ್, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘ ರಾಮಣ್ಣ ವಿಟ್ಲ, ಜಿಲ್ಲಾನಾಯಕರು ಹರಿದಾಸ್ ಭಟ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್‌ನಾಥ್ ಬಾಳ್ತಿಲ, ಜಮಾತೇ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕರು ಅಮೀನ್ ಅಹ್ಸನ್, ಯುವ ರೈತ ಘಟಕದ ಜಿಲ್ಲಾ ಗೌರವಾಧ್ಯಕ್ಷ ಸುರೇಂದ್ರ ಕೇರಿಯ, ರಾಜ್ಯ ಮುಖಂಡ ಕೆ.ವಿ ಭಟ್, ಉಪಸ್ಥಿತರಿದ್ದರು.
ಆದಿತ್ಯ ಎನ್ ಕೊಲ್ಲಾಜೆ ಸ್ವಾಗತಿಸಿ, ವಿಷಯ ಮಂಡಿಸಿದರು.

LEAVE A REPLY

Please enter your comment!
Please enter your name here