ಬೆಳ್ತಂಗಡಿ: ಬೆಳ್ತಂಗಡಿ ಲೋಬೊ ಟಿವಿಎಸ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟಿ ಜ.4 ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಎಲೆಕ್ಟ್ರಿಕ್ ಸ್ಕೂಟಿಯ ವೈಶಿಷ್ಟ್ಯಗಳು : ಟಯರ್ ಸೈಜ್ 90/90-12 ಟ್ಯುಬ್‌ಲೆಸ್, 117.2 ಕೆ.ಜಿ. ತೂಕ ಹೊಂದಿರುವ ಫ್ರಂಟ್ ಸಸ್ಪೆಕ್ಷನ್ ಟೆಲಿಸ್ಕೋಪಿಕ್, ರಿಯೋನ್ ಸಸ್ಪೆಕ್ಷನ್ ಹೈಡ್ರೊಲಿಕ್ ಟ್ವಿನ್ ಟ್ಯೂಬ್ ಶಾಕ್, ಫ್ರಂಟ್ ಬ್ರೆಕ್ ಡಿಸ್ಕ್, ಎಲ್‌ಇಡಿ ಹೆಡ್ ಲ್ಯಾಂಪ್, ಬ್ಲೂಟೂತ್ ಕನೆಕ್ಟಿಂಗ್, ಇನ್‌ಕಂಮಿಗ್ ಕಾಲ್ ಅಲಾರ್ಟ್, ಬ್ಯಾಟರಿ ಲೆವೆಲ್ ಇಂಡಿಕೇಟರ್, ಸ್ಮಾರ್ಟ್ ಫೋನ್ ರೈಡ್, ಡೇಟಾ ಅಕ್ಸೆಸ್, ಯುಎಸ್‌ಬಿ ಚಾರ್ಜರ್, ಗ್ರೆ, ಸಿಲ್‌ವರ್,ಮತ್ತು ಕೆಂಪು ಬಣ್ಣದಲ್ಲಿ ಲಭ್ಯ. 105 ಕಿ.ಮೀ ಚಲಿಸಬಲ್ಲದು. ಆಕರ್ಷಕವಾಗಿದ್ದು, ಹೆವಿ ದ್ವಿಚಕ್ರ ವಾಹನವಾಗಿದ್ದು ಉತ್ತಮ ಸೌಲಭ್ಯಗಳನ್ನು ಹೊಂದಿರುವ ಈ ದ್ವಿಚಕ್ರ ವಾಹನ ಮೊದಲ ಗ್ರಾಹಕರಾದ ಗಣೇಶ್ ಐತಾಳ್ ರವರಿಗೆ ವಾಹನದ ಕೀ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾಲಕರಾದ ರೊನಾಲ್ಡ್ ಲೋಬೊ, ವ್ಯವಸ್ಥಾಪಕರಾದ ಅಶೋಕ್ ಮೋನಿಸ್, ಗಣೇಶ್, ಸಂಧ್ಯಾ ಮೊದಲಾದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳ್ತಂಗಡಿ ಲೋಬೊ ಟಿವಿಎಸ್‌ನಲ್ಲಿ ಪ್ರಥಮ ಎಲೆಕ್ಟ್ರಿಕ್ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ
p>