ಸಿಯೋನ್ ಆಶ್ರಮದಲ್ಲಿ ಸಾರ್ವಜನಿಕ ಹೊಸ ವರ್ಷಚಾರಣೆ

0

ನೆರಿಯ :ಗಂಡಿಬಾಗಿಲಿನ ಪ್ರತಿಷ್ಟಿತ ಸಿಯೋನ್ ಆಶ್ರಮ ದಲ್ಲಿ ಇಂದು ವಿಶಿಷ್ಟ ವಿನೂತನ ರೀತಿಯಲ್ಲಿ ಹೊಸ ವರ್ಷಚಾರಣೆ ನಡೆಸಲಾಯಿತು. ಇಲ್ಲಿನ ಸ್ಥಳೀಯ ವಾಹನ ಚಾಲಕ ಮಾಲಕ ಸಂಘ ಹಾಗೂ ಊರ ನೆರೆ ಕೆರೆ ಗ್ರಾಮಸ್ಥರ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಸ್ಥಳೀಯ ರಲ್ಲಿ ಸೇವಾ ಭಾವನೆ ಪರಸ್ಪರ ದುರ್ಬಲರಿಗೆ ಸಹಾಯ ಹಸ್ತ ಚಾಚುವ ಪ್ರಯತ್ನ ವನ್ನು ಇನ್ನಷ್ಟು ಸಮಾಜ ಮುಖಿ ಯಾಗಿಸುವ ಪ್ರಯತ್ನ ಇದರ ಹಿಂದಿದೆ.

ಜೋಸೆಫ್ ಪಿ ಪಿ ಗಂಡಿಬಾಗಿಲು ಹಾಗೂ ಡೆನ್ನಿಸ್ ತೋಟ್ಟತಾಡಿ ಸಂಚಾಲಕರಾಗಿ ಈ ಕಾರ್ಯಕ್ರಮ ಸಂಘಟಿಸಲಾಯಿತು.
ಕಾರ್ಯಕ್ರಮ ವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯ ದ ಪರಮ ಪೂಜ್ಯ ಧರ್ಮಾ ಧ್ಯ ಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ ಇದನ್ನು ಉದ್ಘಾಟಿಸಿ ದೇವ ಪ್ರೀತಿ ಯೇಸು ಕ್ರಿಸ್ತ ರ ಮುಖಾಂತರ ಮಾನವ ರೂಪ ಪಡೆಯಲಾಯಿತು ಇದು ನಮ್ಮ ಸತ್ಕಾರ್ಯ ಗಳ ಮುಖಾಂತರ ನಿರಂತರ ನಡೆಸಲು ಕರೆ ನೀಡಿದರು
ಕಾರ್ಯಕ್ರಮ ದ ಅಧ್ಯಕ್ಷ ತೆ ಯನ್ನು ಯು ಸಿ ಪೌಲೋಸ್ ವಹಿಸಿದರು.
ತೋಟ್ಟ ತಾಡಿ ವಲಯದ ವಂದನಿಯ ಜೋಸ್ ಪೂವತ್ತಿಂಕಲ್ ಫಾದರ್ ಸಿರಿಲ್ ದೇವಗಿರಿ, ನೆರಿಯ ಪಂಚಾಯತ್ ಸದಸ್ಯರಾದ ಬಾಬಣ್ಣ ಗೌಡ ಪರ್ಪಳ, ಆಶ್ರಫ್ ನೆರಿಯ, ಸಂಚಾಲಕರಾದ ಡೆನಿಸ್ ತೋಟ್ಟತಾಡಿ,ಪಿ ಪಿ ಜೋಸೆಫ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು ಗಂಡಿಬಾಗಿಲಿನ ವಂದನಿಯ ಶಾಜಿ ಮಾತ್ಯ ಸಂಘ ದ ಸೇವಾ ಚಟುವಟಿಕೆ ಗಳನ್ನು ಶ್ಲಾಘಿಸಿದರು. ಕ್ರಿಸ್ತ ಮಾರ್ಟ್ ನ ಶಿಜು ಸಿ ವಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ. ಆಶ್ರಮದ ಶೋಭಾ ವಂದನಾರ್ಪಣೆ ಗೈದರು.

LEAVE A REPLY

Please enter your comment!
Please enter your name here