

ಬೆಳ್ತಂಗಡಿ: ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಜಿಲ್ಲೆ ಹಾಗೂ ಪಕ್ಕದ ರಾಜ್ಯದ ಪೊಲೀಸ್ ಠಾಣೆಗಳಿಗೆ ಬೇಕಾಗಿರುವ ಕುಖ್ಯಾತ ಕಳವು ಆರೋಪಿ ಪಡಂಗಡಿ ನಿವಾಸಿ ಕುಂಞಮೊನು ಅಲಿಯಾಸ್ ಜಾಫರ್ ಕುಂಞಮೊನು ಎಂಬಾತನನ್ನು ಬಂಧಿಸುವಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಡಬ, ಉಪ್ಪಿನಂಗಡಿ, ಬಂಟ್ವಾಳ, ಚಿಕ್ಕಮಗಳೂರು , ಬೇಲೂರು ಹಾಗೂ ಪಕ್ಕದ ಕೇರಳ ರಾಜ್ಯದ ಕಾಸರಗೋಡಿನ ಠಾಣೆಯಲ್ಲಿ ಸುಮಾರು 35ಕ್ಕೂ ಹೆಚ್ಚೂ ಪ್ರಕಣಗಳು ಇವನ ಮೇಲೆ ಇದೆ. ತಲೆ ಮರೆಸಿ ಕೊಂಡಿದ್ದ ಈತನನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರ ಮಾರ್ಗದರ್ಶನದಲ್ಲಿ ಹೆಡ್ ಕಾನ್ಸ್ಟೇಬಲ್ ಮಾಲತೇಶ್ ಹಾಗೂ ಮುನಿಯಪ್ಪ ನಾಯಕ್ ಅವರು ಬಂಧಿಸಿದ್ದಾರೆ.