
ಬೆಳ್ತಂಗಡಿ: ಬಿಜೆಪಿ ಯಲಹಂಕ ವತಿಯಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ನೆಲಮಂಗಲ ಟೋಲ್‍ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ತನಕ ನಡೆಯುವ “ಧರ್ಮಸ್ಥಳ ಚಲೋ” ಅಭಿಯಾನಕ್ಕೆ ಆ.16ರಂದು ಬೆಳಿಗ್ಗೆ ಯಲಹಂಕ-ನೆಲಮಂಗಲ-ಕುಣಿಗಲ್ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಾಲನೆ ನೀಡಲಾಯಿತು. ಪೂಜಾ ವಿಧಿವಿಧಾನ ನೆರವೇರಿಸಿ 250ಕ್ಕೂ ಹೆಚ್ಚು ನಾಲ್ಕು ಚಕ್ರ ವಾಹನಗಳು ಮತ್ತು ನೂರಾರು ಬೈಕ್ ಗಳ ಅಭಿಯಾನವನ್ನು ಆರಂಭಿಸಲಾಯಿತು. ಅಪಪ್ರಚಾರ ಖಂಡಿಸಿ ಯಾತ್ರೆ ನಡೆಯುತ್ತಿದ್ದು, ಸಂಜೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರನ ದರ್ಶನ ಪಡೆಯಲಿದ್ದಾರೆ.