



ನಾಲ್ಕೂರು : ಕುದ್ರೊಟ್ಟು ವಿನಿಂದ ಸೂಳಬೆಟ್ಟು ಬೊಕ್ಕಸ ಡೆಪ್ಪುಣಿ ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಮಂಜೂರುಗೊಳಿಸಿದ ಶಾಸಕ ಹರೀಶ್ ಪೂಂಜರವರಿಗೆ ಕೃತಜ್ಞತೆ ಕೋರಿದ ಬ್ಯಾನರನ್ನು ಬೊಕ್ಕಸ ರಸ್ತೆಯಲ್ಲಿ ಅಳವಡಿಸಿದ್ದು ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಎಂದು ಸಮಾಜಸೇವಕರಾದ ಕರುಣಾಕರ ಹೆಗ್ಡೆ ಬೊಕ್ಕಸ ಆರೋಪಿಸಿದ್ದಾರೆ.


ಶಾಸಕ ಹರೀಶ್ ಪೂಂಜರವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ.ಹಾಗೂ ಅನುದಾನದ ನಾಮಫಲಕವನ್ನು ಕಿತ್ತು ತೆಗೆದು ಬಿಸಾಡಿದ್ದಾರೆ. ಇಂತಹ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು ಯಾರೆಂದು ಗೊತ್ತಾಗಬೇಕು ಎಂದು ಅಳದಂಗಡಿ ಸತ್ಯದೇವತೆಗೆ ಹರಕೆ ಮಾಡಿಕೊಂಡಿದ್ದೇವೆ ಎಂದವರು ತಿಳಿಸಿದ್ದಾರೆ.


            





