ಖ್ಯಾತ ಚಲನಚಿತ್ರ ನಟ ಶ್ರೀ ರಮೇಶ್ ಅರವಿಂದ್ ಮತ್ತು ಅರ್ಚನಾ ರಮೇಶ್ ದಂಪತಿ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ: ಸಿರಿ ಸಿಬ್ಬಂದಿಗಳಿಂದ ಗೌರವಾರ್ಪಣೆ

0

ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯೂ ಆಗಿರುವ ಶ್ರೀಯುತ ರಮೇಶ್ ಅರವಿಂದ್ ಮತ್ತು ಶ್ರೀಮತಿ ಅರ್ಚನಾ ರಮೇಶ್ ದಂಪತಿಗಳು ಸಿರಿ ಸಂಸ್ಥೆಯ ಪ್ರಧಾನ ಕಛೇರಿ ಉಜಿರೆಗೆ ಡಿಸೆಂಬರ್.28 ರಂದು ಭೇಟಿ ನೀಡಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಎನ್ ಜನಾರ್ಧನರವರು ಶ್ರೀ ರಮೇಶ್ ಅರವಿಂದ್ ಮತ್ತು ಶ್ರೀಮತಿ ಅರ್ಚನಾ ರಮೇಶ್ ದಂಪತಿಯನ್ನು ಸ್ವಾಗತಿಸಿ, ಸಿರಿ ಸಂಸ್ಥೆಯ ಕಿರು ಪರಿಚಯವನ್ನು ಮಾಡಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ರಮೇಶ್ ಅರವಿಂದರವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪೂಜ್ಯ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲಾ ಸ್ತ್ರೀಯರೂ ಶ್ರೀ ದುರ್ಗಾ ಮಾತೆಯ ಸ್ವರೂಪವಾಗಿದ್ದು, ಎಲ್ಲರೂ ಧೈರ್ಯ ಹಾಗೂ ಮನಃಪೂರ್ವಕವಾಗಿ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ನಮ್ಮ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ. ಮುಂಬರುವ ೨೦೨೩ನೇ ನವ ವರ್ಷ ಎಲ್ಲರ ಜೀವನದಲ್ಲೂ ಸಮೃದ್ಧಿಯನ್ನು ತರಲಿ ಎಂದು ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ರಾಜೇಶ್ ಪೈ ಮತ್ತು ಶ್ರೀಮತಿ ಅರ್ಚನಾ ರಾಜೇಶ್ ಪೈ ದಂಪತಿ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕರಾದ ಪ್ರಸನ್ನ, ಎಸ್.ಕೆ.ಡಿ.ಆರ್.ಡಿ.ಪಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಹಾಗೂ ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಶ್ರೀ ರಮೇಶ್ ಅರವಿಂದ್ ಮತ್ತು ಅರ್ಚನಾ ರಮೇಶ್ ದಂಪತಿಯನ್ನು ಅಭಿನಂದಿಸಿ, ಗೌರವಾರ್ಪಣೆ ಸಲ್ಲಿಸಿದರು. ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here