ಚಾರ್ಮಾಡಿ: ಚಾರ್ಮಾಡಿ ಘಾಟಿ 9 ತಿಂಗಳ ಹಿಂದೆ ಮರಕ್ಕೆ ಕಟ್ಟಿ ಹಾಕಿ ಕೊಲೆ ಗೈದ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನು ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಗೌರಿಬಿದನೂರು ಕೋಣಕುಂಟೆ ಹರಿನಗರ ಎಚ್. ಶರತ್ ಎಂಬವರನ್ನು ಈ ಆರೋಪಿಗಳು 9 ತಿಂಗಳ ಹಿಂದೆ ಅಪಹರಿಸಿ ಗೌರಿಬಿದನೂರಿನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಮೃತ ದೇಹವನ್ನು ಚಾರ್ಮಾಡಿ ಘಾಟಿಗೆ ಎಸೆದು ಸಾಕ್ಷಿ ನಾಶ ಪಡಿಸಲಾಗಿದೆ ಎಂದು ಪೊಲೀಸ್ ಮೂಲ ತಿಳಿಸಿದೆ.
ಪ್ರಕರಣ : ಕೊಲೆಯಾದ ವ್ಯಕ್ತಿ ಶರತ್ ಸಬ್ಸಿಡಿ ದರದಲ್ಲಿ ಸರಕಾರದಿಂದ ಕಾರ್ ಕೊಡಿಸುವುದಾಗಿ ಯಲಹಂಕ ನಿವಾಸಿಗಳಿಂದ ಲಕ್ಷಾಂತರ ಹಣ ಪಡೆದುಕೊಂದಿದ್ದ. ಕಾರನ್ನು ಕೊಡಿಸದೆ ಇದ್ದ ಕಾರಣ ಗ್ರಾಹಕರು ಆತನ ವಿರುದ್ದ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಆತನ ವಂಚನೆ ಪ್ರಕರಣ ದಾಖಲಿಸಿದ್ದರು. ಕಳೆದ ಮಾರ್ಚ್ ನಲ್ಲಿ ಹಣ ವಾಪಸು ಕೊಡಿಸುವಂತೆ ಹಣ ನೀಡಿದವರು ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಎಚ್. ಜಿ. ವೆಂಕಟಾಚಲಪತಿ ಕೇಳಿ ಕೊಂಡಿದ್ದರು. ಹಣ ಕಳೆದು ಕೊಂಡಿದ್ದ ಮನವಿ ಮೇರೆಗೆ ವೆಂಕಟಾಚಲಪತಿ ತನ್ನ ಪುತ್ರ ಎ. ವಿ. ಶರತ್ ನಿಗೆ ಹಣ ವಸೂಲಿ ಮಾಡುವಂತೆ ಸೂಚಿಸಿದ್ದರು.ಇವರ ಸ್ನೇಹಿತರು ಮತ್ತು ಹಣ ಕಳೆದುಕೊಂಡವರು ಅಪಹರಿಸಿ ಸಂಚು ರೂಪಿಸಿದರು.