ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಗ್ರಾಮ ಸಭೆ

0

ಮಡಂತ್ಯಾರು ಗ್ರಾಮ ಪಂಚಾಯತು ನಲ್ಲಿ ಮಹಿಳಾ ಗ್ರಾಮ ಸಭೆ ನಡೆಯಿತು . ಮಹಿಳಾ ಗ್ರಾಮ ಸಭೆ ಅಧ್ಯಕ್ಷತೆ ಯನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತರಬೇತುದಾರರಾದ ಶ್ರೀಮತಿ ವಿನುತ ರಜತ್ ರವರು ಭಾಗವಹಿಸಿದ್ದರು . ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿ ಮಹಿಳೆಯರಿಗೆ ಇರುವ ಸ್ಥಾನಮಾನಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಸಂಗೀತ ಶೆಟ್ಟಿ . ಪಂಚಾಯತು ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ ಇದ್ದರು. ಸಭೆಯಲ್ಲಿ ಪಂಚಾಯತು ಸದಸ್ಯರು, ಸಿಬ್ಬಂದಿ ವರ್ಗದವರು , ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ತೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here