ಮುಂಡಾಜೆ ಶಬರಿಮಲೆಗೆ ಹೋಗುವ ಮಿನಿ ಬಸ್ ಬ್ರೇಕ್ ಫೈಲ್‌: ಇಬ್ಬರಿಗೆ ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

0

ಮುಂಡಾಜೆ : ಶಬರಿಮಲೆ ಯಾತ್ರೆಗೆ ಹೊರಟ್ಟಿದ್ದ ಬಳ್ಳಾರಿಯ ಜಿಲ್ಲೆಯ ಕೂಡ್ಲೂಗಿ ತಾಲೂಕಿನ 21 ಜನರು ಮಿನಿ ಬಸ್ ನಲ್ಲಿ‌ ಚಾರ್ಮಾಡಿ ಘಾಟ್ ಮೂಲಕ ಶಬರಿಮಲೆಗೆ ಪ್ರಯಾಣ ಮಾಡುವಾಗ ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಿಯಂತ್ರಣ ಬ್ರೇಕ್ ಫೈಲ್ ಅಗಿ ಅರಣ್ಯಕ್ಕೆ ಚಲಿಸಿದ್ದು.

ಮಿನಿ ಬಸ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಉಳಿದ ಶಶಿ , ಜಲಧಾರ, ರಘು, ಬಸವರಾಜ , ಲೋಕ ಎಂಬವರಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆರು ಆಂಬುಲೆನ್ಸ್ ಅಗಮಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here