ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇಲ್ಲಿನ ಮಾಹಿತಿ ತಂತ್ರಜ್ಞಾನದ ಉದ್ಘಾಟನಾ ಸಮಾರಂಭವನ್ನು ಡಿ.22 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿಯಾದ ಪ್ರೊ ಪ್ರಕಾಶ್ ಕ್ರಮಾಧಾರಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ವಿನ್ಸೆಂಟ್ ಡಿಸೋಜ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಮಾಹಿತಿ ತಂತ್ರಜ್ಞಾನವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತೇವೆ. ನಾವು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಡಿಜಿಟಲ್ ಏಲಿಯನ್ಸ್ ಗಳು. ಕೃತಕ ಬುದ್ಧಿಮತ್ತೆ ಹಾಗೂ ಮಾಹಿತಿ ತಂತ್ರಜ್ಞಾನವು ನಮ್ಮ ಬೆಳವಣಿಗೆ ಮತ್ತು ವೃತ್ತಿ ಜೀವನವನ್ನು ಅಭಿವೃದ್ಧಿಪಡಿಸಲು ಉಪಯುಕ್ತವಾಗಿದೆ. ನಾವು ಮಾಹಿತಿ ತಂತ್ರಜ್ಞಾನದ ಜೊತೆ ಜೊತೆಗೆ ನಡೆಯಬೇಕು ಇಲ್ಲವಾದಲ್ಲಿ ನಾವು ತುಂಬಾ ಹಿಂದುಳಿಯುತ್ತೇವೆ” ಎಂದು ಈ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯನ್ನು ಸನ್ಮಾನಿಸಲಾಯಿತು. ತದನಂತರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಪ್ರಕಾಶ್ ಕ್ರಮಾಧಾರಿ ತಮ್ಮ ಹಿತ ನುಡಿಗಳೊಂದಿಗೆ ಮಕ್ಕಳನ್ನು ಉತ್ತೇಜಿಸಿದರು.
ವೇದಿಕೆಯಲ್ಲಿ ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಜನಾರ್ಧನ ರಾವ್ ಡಿ., ಮಾಹಿತಿ ತಂತ್ರಜ್ಞಾನದ ಸಂಯೋಜಕಿ ಜೆಸಿಂತಾ ಡಿಸೋಜ, ವಿದ್ಯಾರ್ಥಿ ಪ್ರತಿನಿಧಿಗಳಾದ ತುಳಸಿಪ್ರಸಾದ್ ಮತ್ತು ಪ್ರತೀಕ್ಷಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥರಾದ ಶ್ರೀ ಜನಾರ್ಧನ ರಾವ್ ಡಿ. ಸ್ವಾಗತಿಸಿದರು. ಫಾತಿಮ ನಡ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಹಿತಿ ತಂತ್ರಜ್ಞಾನದ ಸಂಯೋಜಕಿ ಜೆಸಿಂತಾ ಡಿಸೋಜರವರು ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ನಂತರ “ಪೇಪರ್ – ಕಟ್ಔಟ್” ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದ ತೇಪೆ ಚಿತ್ರಗಾರಿಕೆಯ ಸ್ಪರ್ಧೆಯನ್ನು ಆಯೋಜಿಸಲಾಯಿತು.