ಬೆಳಾಲು : ಮಾಯ ಮಹಾದೇವ ದೇವಸ್ಥಾನದಿಂದ ಓಡಿಲ್ನಾಳ ಮೈರಲ್ಕೆ ಶ್ರೀ ಮಹಾಲಿಂಗೇಶ್ವರ ದೇವರ ಮೂರ್ತಿಯ ಭವ್ಯ ವಿಹಾರ ಯಾತ್ರೆ ಡಿ.22 ರಂದು ಬೆಳಾಲು-ಉಜಿರೆ -ಬೆಳ್ತಂಗಡಿ-ಗುರುವಾಯನಕೆರೆ-ಗೇರುಕಟ್ಟೆ ಮಾರ್ಗವಾಗಿ ಎತ್ತಿನ ಗಾಡಿಯಲ್ಲಿ ವಿವಿಧ ಭಜನಾ ತಂಡಗಳ ಭಜನೆ ಬ್ಯಾಂಡ್ ವಾದ್ಯಗಳೊಂದಿಗೆ ಸಾಗಿತು.
ಮಾಯ ದೇವಸ್ಥಾನದಲ್ಲಿ ಪದ್ಮನಾಭ ತಂತ್ರಿವರಿಯರ ನೇತೃತ್ವದಲ್ಲಿ ಗಣಪತಿ ಹೋಮ, ಅಭಿಷೇಕ ಶ್ರೀ ದೇವರ ಪೂಜಾ ಕಾರ್ಯಕ್ರಮದ ಬಳಿಕ ಮೆರವಣಿಗೆ ಸಾಗಿತು. ಶಾಸಕ ಹರೀಶ್ ಪೂಂಜ,ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಮಾಯ ದೇವಸ್ಥಾನವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ, ಸದಸ್ಯರು, ಧರ್ಮೋತ್ತನ ಟ್ರಸ್ಟ್ ಅಧ್ಯಕ್ಷ ವೃಷಭ ಅರಿಗ, ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಭಜನಾ ಮಂಡಳಿಗಳ ಪದಾಧಿಕಾರಿಗಳು ಊರ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಅಲ್ಲಲ್ಲಿ ದೇವಸ್ಥಾನ, ದೈವಸ್ಥಾನಗಳ ಪ್ರಮುಖರು, ಭಕ್ತರು ಸ್ವಾಗತಿಸಿದರು.
p>