ಬೆಳ್ತಂಗಡಿ :ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸುವರ್ಣ ಮಹೋತ್ಸವ ಸಮಿತಿ ಜೂನಿಯರ್ ರೆಡ್ ಕ್ರಾಸ್ ಘಟಕ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಸ್ಯೋದ್ಯಾನ ನಿರ್ಮಾಣ ಉದ್ಘಾಟನೆ ಡಿ.15 ರಂದು ನಡೆಯಿತು.
ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಪ್ರಕಾಶ್ ಕಾರಂತ್ ಇವರು ಆಗಮಿಸಿ ಸಾಂಕೇತಿಕವಾಗಿ 5 ಗಿಡಗಳನ್ನು ನೆಟ್ಟು ಹಾಗೂ ಮರಗಳಿಗೆ ಅದರ ವೈಜ್ಞಾನಿಕ ಹೆಸರಿನ ನಾಮಫಲಕವನ್ನು ಅಳವಡಿಸುವುದರ ಮೂಲಕ ಸಸ್ಯೋದ್ಯಾನ ನಿರ್ಮಾಣದ ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಅರಣ್ಯಾಧಿಕಾರಿ ತ್ಯಾಗರಾಜ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಮನೋರಮ ಭಟ್,ಕಾರ್ಯದರ್ಶಿ ರೋ.ರಕ್ಷಾ ರಾಗ್ನೇ ಶ್ , ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರೋ.ಬಿ. ಕೆ ಧನಂಜಯ ರಾವ್ ಕಾರ್ಯಾಧ್ಯಕ್ಷ ರೊನಾಲ್ಡ್ ಲೋಬೋ, ನಿವೃತ್ತ ಮೇಜರ್ ಜನರಲ್ ರೋ.ಎಂ ವಿ ಭಟ್ ರೆಡ್ ಕ್ರಾಸ್ ಸಮಿತಿಯ ಕಾರ್ಯದರ್ಶಿ ಮೋಹನ್ ಭಟ್. ರೋಟರಿ ಕ್ಲಬ್ ಸದಸ್ಯರು, ಕಾಲೇಜು ಉಪನ್ಯಾಸಕರು, ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಗೌರವಿ ನಿರೂಪಿಸಿ ಶ್ರೀಮತಿ ಮನೋರಮಾ ಭಟ್ ಸ್ವಾಗತಿಸಿದರು ಪ್ರಾಂಶುಪಾಲ ಸುಕುಮಾರ ಜೈನ್ ವಂದನಾರ್ಪಣೆ ಮಾಡಿದರು.