


ಮುಂಡಾಜೆ: ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ನೇತೃತ್ವದಲ್ಲಿ ತೋಟತ್ತಾಡಿ, ಮುಂಡಾಜೆ ಹಾಗೂ ಉಜಿರೆ ಬಂಟರ ಗ್ರಾಮ ಸಮಿತಿಗಳ ಸಹಭಾಗಿತ್ವದಲ್ಲಿ ಉಜಿರೆ ವಲಯ ಬಂಟರ ಕ್ರೀಡಾಕೂಟವು ಡಿ11 ರಂದು ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನೆರವೇರಿತು.
ಮುಂಡಾಜೆಯ ಹಿರಿಯರಾದ ರಾಮಕೃಷ್ಣ ಶೆಟ್ಟಿ ನಾಗಂಡ , ಚಂದಪ್ಪ ಶೆಟ್ಟಿ ಕೂಳೂರು, ಬಾಬುಶೆಟ್ಟಿ ಬಾವಂತಬೆಟ್ಟು ಮತ್ತು ರಮೇಶ್ ರೈ ಮದ್ಮಲ್ ಕಟ್ಟೆ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಲಯ ಬಂಟರ ಸಂಘದ ಅಧ್ಯಕ್ಷೆ ವನಿತಾ ವಿ ಶೆಟ್ಟಿ ಹಾಗೂ ಮುಂಡಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ಅಗರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಟಿನಿ, ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾವಿ ಶೆಟ್ಟಿ, ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಗ್ರಾ.ಪಂ ಸದಸ್ಯ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ, ತೋಟತ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಅಮೃತಾ ವಿ ಶೆಟ್ಟಿ ಮತ್ತು ವಿಜಯಕುಮಾರ್ ರೈ, ವಲಯ ಹಾಗೂ ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟದ ಮುಖ್ಯ ಪ್ರಾಯೋಜಕರಾದ ರವಿಪ್ರಸಾದ್ ಶೆಟ್ಟಿ ಬೆಂಗಳೂರು, ಸುಶಾಂತ್ ಶೆಟ್ಟಿ ಅಗರಿ, ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಕಲಾಮಧು ಶೆಟ್ಟಿ, ಜಯರಾಮ ಶೆಟ್ಟಿ ನೈಯಾಲು ಮತ್ತು ಜಯಪ್ರಕಾಶ್ ರೈ ಕಲ್ಲಹಿತ್ಲು ಇವರಿಗೆ ಕೃತಜ್ಞತೆ ಸಮರ್ಪಿಸಿ ಗೌರವಿಸಲಾಯಿತು.
ವಲಯದ ಹಾಗೂ ಗ್ರಾಮ ಸಮಿತಿಯ ಎಲ್ಲಾ ಸದಸ್ಯರು ತನು ಮನ ಧನಗಳಿಂದ ಸಹಕರಿಸಿ, ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.
ಉಜಿರೆ ವಲಯದ ಮಾಜಿ ಅಧ್ಯಕ್ಷ ವೆಂಕಟರಮಣ ಶೆಟ್ಟಿ ಕಲ್ಮಂಜ, ಕೋಶಾಧಿಕಾರಿ ಜಯಾನಂದ ಶೆಟ್ಟಿ, ಮುಂಡ್ರುಪಾಡಿ ಮತ್ತು ಕ್ರೀಡಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಮುಂಡಾಜೆ ಇವರು ಕ್ರೀಡಾಕೂಟದ ಜವಾಬ್ದಾರಿ ವಹಿಸಿದ್ದರು.
ಜೊತೆ ಕಾರ್ಯದರ್ಶಿ ನವೀತ್ ಶೆಟ್ಟಿ ಮತ್ತು ಹರ್ಷಿತ್ ಶೆಟ್ಟಿ ನೈಯಾಲು ಕಾರ್ಯಕ್ರಮ ನಿರೂಪಿಸಿದರು. ಜಯಂತಿ ಶೆಟ್ಟಿ ನೆಯ್ಯಾಲು ಇವರು ಪ್ರಾರ್ಥಿಸಿ , ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೊಸಗದ್ದೆ ಇವರು ವಂದಿಸಿದರು.