


ಗುರುವಾಯನಕೆರೆ : ವಿಜಯಸೊಸೈಟಿ ಕ್ರೆಡಿಟ್ ಕೋ ಆಪರೇಟಿವ್ ಪ್ರಧಾನ ಕಚೇರಿ ಗುರುವಾಯನಕೆರೆ ಇದರ ನವೀಕೃತ ಕಚೇರಿಯ ಉದ್ಘಾಟನೆ ಡಿ.14 ರಂದು ನಡೆಯಿತು. ಶಾಖಾ ಕಛೇರಿಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು. ಸಭಾ ಕೊಠಡಿಯನ್ನು ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ ವಹಿಸಿದ್ದರು.

ಭದ್ರತಾ ಕೊಠಡಿಯನ್ನು ಕರಾವಳಿ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೆರವೇರಿಸಿದರು. ಗಣಕ ಯಂತ್ರದ ಉದ್ಘಾಟನೆಯನ್ನು ಸಹಕಾರ ಸಂಘಗಳ ಸಹಾಯಕ ನಿಭಂದಕರಾದ ತ್ರಿವೇಣಿ ರಾವ್ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಬೆಳ್ತಂಗಡಿ ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಗುರುವಾನಕೆರೆ ಉದ್ಯಮಿ ಅಬ್ದುಲ್ ರಶೀದ್ ಉದ್ಯಮಿಗಳು, ಭಾಗವಹಿಸಿದ್ದರು.

ಸೊಸೈಟಿ ಉಪಾಧ್ಯಕ್ಷ ಎಂ. ಜಿ. ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ ಶೆಟ್ಟಿ, ನಿರ್ದೇಶಕರುಗಳಾದ ಬಿ. ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಹೆಚ್, ಜಯಂತ ಶೆಟ್ಟಿ, ಪುಷ್ಪರಾಜ್ ಶೆಟ್ಟಿ,ಬಿ. ನಾರಾಯಣ ಶೆಟ್ಟಿ ಕೃಷ್ಣ ರೈ ಟಿ., ರಘುರಾಮ ಶೆಟ್ಟ ಎ. ಕೆ. ಸದಾಶಿವ ಶೆಟ್ಟಿ, ರಾಜೇಶ್ ಶೆಟ್ಟಿ, ಮಂಜುನಾಥ ರೈ, ಪುರಂದರ ಶೆಟ್ಟಿ, ಸಾರಿಕ ಶೆಟ್ಟಿ, ಅಂಬಾ ಬಿ, ಆಳ್ವ,ಜಯರಾಮ ಭಂಡಾರಿ ಎಂ, ಸಂತೋಷ್ ಶೆಟ್ಟಿ, ಶಾಖಾ ಪ್ರಬಂಧಕರು ಮತ್ತು ಸಿಬ್ಬಂದಿ ವರ್ಗ, ವಿವಿಧ ಗಣ್ಯರು, ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು.