ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಡಿ. 12ರಂದು ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿಯ ಧರ್ಮಗುರುಗಳಾದ ವಂ ಫಾ. ಪ್ರವೀಣ್ ಡಿಸೋಜಾ ರವರು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಆಚರಿಸುವುದು ಮಹತ್ವಪೂರ್ಣವಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರು ವಂ ಫಾ ಕ್ಲಿಫರ್ಡ್ ಸೈಮನ್ ಪಿಂಟೋ ರವರು ಮಾತನಾಡುತ್ತಾ ಜಾತಿ ಮತ ಧರ್ಮ ಭಾಷೆಗಳ ಬೇಧವನ್ನು ಮರೆತು ಒಟ್ಟಾಗಿ ಬಾಳಬೇಕೆಂದು ನುಡಿದು ಶುಭ ಹಾರೈಸಿದರು. ವಿದ್ಯಾರ್ಥಿನಿ ರಿಯಾ ಸಿಕ್ವೇರಾ ರಾಷ್ಟ್ರೀಯ ಭಾವೈಕ್ಯತಾ ದಿನದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಹಾಡು, ನೃತ್ಯ ಮತ್ತು ಕಿರು ನಾಟಕದ ಮೂಲಕ ರಾಷ್ಟ್ರೀಯ ಭಾವೈಕ್ಯತೆಯ ಪ್ರಾಮುಖ್ಯತೆಯನ್ನು ಸಾರಿದರು.
ವಿದ್ಯಾರ್ಥಿಗಳಾದ ರೀವನ್ ಸೀಕ್ವೇರಾ ಸ್ವಾಗತಿಸಿ, ನಿಜ ವಂದಿಸಿದರು. ಮರ್ವಿನ್ ಡಿಸೋಜ ಮತ್ತು ಫಾತಿಮತ್ ನಾಫಿಯಾ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲೀಷ್ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಹಶಿಕ್ಷಕಿಯರಾದ ಶ್ರೀಮತಿ ಸರಿತಾ ರೋಡ್ರಿಗಸ್ ಮತ್ತು ಕು. ದಿವ್ಯಾ ಜಿ ಸಹಕರಿಸಿದರು.