ಉಜಿರೆ :ಉಜಿರೆ ಗ್ರಾಮ ಪಂಚಾಯತಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಕ್ಕೆ ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ವಿಶೇಷ ಮಕ್ಕಳು (ಎಂಡೋ ಸಂತ್ರಸ್ತರು) ಹಾಗೂ ಸಿಬ್ಬಂದಿ ವರ್ಗದವರು ಡಿ.7 ರಂದು ಬೇಟಿ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪಂಚಾಯತು ಅಭಿವೃಧಿ ಅಧಿಕಾರಿಯವರು ಪ್ರಕಾಶ್ ಶೆಟ್ಟಿ ನೊಚ್ಚ ,ಪಂಚಾಯತ್ ಕಾರ್ಯದರ್ಶಿ ಶ್ರವಣ್ ಕುಮಾರ್ ,ಪಂಚಾಯತಿ ಸದಸ್ಯರು, ಗ್ರಂಥಾಲಯ ಮೇಲ್ವಿಚಾರಕಿ ತಾರ , ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಪುಲ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ವಿಶೇಷ ಚೇತನ ಮಕ್ಕಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಗೌರವ ಪೂರಕವಾಗಿ ಸ್ವಾಗತಿಸಲಾಯಿತು. ನಂತರ ವಿಶೇಷ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.
ನಂತರ ವಿಶೇಷ ಮಕ್ಕಳಿಗಾಗಿ ಗ್ರಂಥಾಲಯದಲ್ಲಿ ಚಿತ್ರ ಬಿಡಿಸಿ ಬಣ್ಣ ಹಚ್ಚುವ ಚಟುವಟಿಕೆಯನ್ನು ಮಾಡಿಸಲಾಯಿತು. ಹಾಡು , ನೃತ್ಯ ವಿವಿಧ ಮನೋರಂಜನಾ ಕಾರ್ಯಕ್ರವನ್ನು ವಿಶೇಷವಾಗಿ ನೀಡಲಾಯಿತು ನಂತರ ಸಿಹಿ-ತಿಂಡಿ ನೀಡಿ ಅವರನ್ನು ಬೀಳ್ಕೊಡಲಾಯಿತು.