ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಡಿ. 14 ಮತ್ತು ಡಿ.15 ರಂದು ಸೇಕ್ರೆಡ್ ಹಾರ್ಟ್ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ ಹೇಳಿದರು.
ಅವರು ಡಿ.13ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
ಡಿ.14 ರಂದು ಬೆಳಗ್ಗೆ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂ. ಫಾ ಬೇಸಿಲ್ ವಾಸ್‌ರವರು ವಹಿಸಲಿದ್ದಾರೆ. ಈ ಪಂದ್ಯಾಟದಲ್ಲಿ 17 ಮಹಿಳಾ ಮತ್ತು 18 ಪುರುಷರ ತಂಡಗಳ ಸುಮಾರು 360 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ನಾಲ್ಕು ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಎಂ.ಕೆ ಅನಂತರಾಜ್ ಮೆಮೋರಿಯಲ್ ಟ್ರೋಫಿ ಹಾಗೂ
ಮಹಿಳೆಯರ ವಿಭಾಗದಲ್ಲಿ ಫೆಬಿಯನ್ ಎ.ಎನ್ ಕುಲಾಸೊ ಮೆಮೊರಿಯಲ್ ಟ್ರೋಫಿ ವಿಜೇತ ತಂಡದ ಪಾಲಾಗಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾಕೂಟ ಸಂಯೋಜಕ ಕಾಯ೯ದಶಿ೯ ಪ್ರೊ. ಅಲೆಕ್ಸ್ ಐವನ್ ಸ್ವಿಕ್ವೇರಾ, ಶಾರೀರಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ.ಸೋಜ, ಉಪ ಪ್ರಾಂಶುಪಾಲ ಪೌಲ್ ಮೆನೇಜಸ್, ವಿಭಾಗದ ಮುಖ್ಯಸ್ಥ ನೆಲ್ಸನ್ ಮೊನಿಸ್ ಉಪಸ್ಥಿತರಿದ್ದರು.
p>