ಲಾಯಿಲ: ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

0

ಲಾಯಿಲ: ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ, ರೋಟರಿ ಕ್ಲಬ್ ಸೇವಾ ಭಾರತಿ (ರಿ) ಕನ್ಯಾಡಿ, ಔಷಧಿ ವ್ಯಾಪಾರಸ್ಥರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಪ್ರಸನ್ನ ಶಿಕ್ಷಣ ಸಂಸ್ಥೆ ಲಾಯಿಲ, ಬೆಳ್ತಂಗಡಿ ಇದರ ಪ್ರಾoಗಣದಲ್ಲಿ ಡಿ.10ರಂದು ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವರು ಕರ್ನಾಟಕ ಸರ್ಕಾರ ಮತ್ತು ಪ್ರಸನ್ನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಗಂಗಾಧರ ಗೌಡ ಇವರು ಉದ್ಘಾಟಿಸಿ ಮಾತನಾಡಿದ ಅವರು ಇದೇ ತರಹದ ಬೃಹತ್ ರಕ್ತದಾನ ಶಿಬಿರವನ್ನು ಕಳೆದ ವರ್ಷವೂ ಸಹ ಪ್ರಸನ್ನ ಶಿಕ್ಷಣ ಸಂಸ್ಥೆ ಪ್ರಾಂಗಣದಲ್ಲಿ ಆಯೋಜಿಸಿ 200 ಬಾಟಲಿ ರಕ್ತವನ್ನು ಬ್ಲಡ್ ಬ್ಯಾಂಕಿಗೆ ನೀಡಲಾಯಿತು. ಅದೇ ರೀತಿಯಾಗಿ ಈ ವರ್ಷವೂ ಸಹ ಪ್ರಸನ್ನ ಸಂಸ್ಥೆಯ ವಿದ್ಯಾರ್ಥಿ ಅಭಿಮಾನಿಗಳು ಮತ್ತು ಹಿತೈಷಿಗಳು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ಹಾಗೆಯೇ ಈ ವರ್ಷವೂ ಕೂಡ 200 ಬಾಟಲಿ ರಕ್ತವನ್ನು ಕೆ.ಎಂ.ಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕಿಗೆ ನೀಡಲಾಯಿತು. ಇದೇ ರೀತಿಯ ರಕ್ತದಾನ ಶಿಬಿರದ ಆಯೋಜನೆಯನ್ನು ಮುಂದಿನ ವರ್ಷಗಳಲ್ಲಿಯೂ ಮಾಡುತ್ತೇವೆ ಎಂದು ಹೇಳಿದರು.


ಈ ಮೂಲಕ “ರಕ್ತದಾನ ಮಹಾದಾನ” ಎನ್ನುವ ಸೇವೆಯಲ್ಲಿ ಪಾಲ್ಗೊಂಡು ಹಲವಾರು ಜನರ ಜೀವ ರಕ್ಷಣೆಗೆ ಕಾರಣರಾಗಿ ರಕ್ತದಾನ ಮಾಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಶಿಬಿರದ ಅಧ್ಯಕ್ಷತೆಯನ್ನು ಸೇವಾ ಭಾರತಿ ಕನ್ಯಾಡಿ ಅಧ್ಯಕ್ಷರಾದ ಕೆ. ವಿನಾಯಕರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆಯವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here