ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ಡಿ.9ರಂದು ಮೆದುಳು ಜ್ವರದ ಲಸಿಕಾ ಅಭಿಯಾನವು ಸುಮಾರು 641 ಮಕ್ಕಳಿಗೆ ಲಸಿಕೆಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆರೋಗ್ಯ ನಿರೀಕ್ಷಣಾಧಿಕಾರಿ ಗಿರೀಶ್, ಹಿರಿಯ ಆರೋಗ್ಯ ಸಹಾಯಕಿ ಮರಿಯಮ್ಮ, ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಕಮಲ, ಭೇಶ್ ಕುಮಾರಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸತೀಶ್, ಸುಂದರ, ಇಗ್ನೀಸ್, ಜೋಸ್ಲಿ, ಶುಶೂಷಣ ಅಧಿಕಾರಿ ಲೀಲಾ, ಆಶಾ ಕಾರ್ಯಕರ್ತೆಯರಾದ ಜಾನಕಿ, ಹೇಮಾ, ಉಷಾ, ಸುನಂದ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ದೀಪಕ್ ಲಿಯೋ ಡೇಸರವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರತಿಸಿದರು.
p>