ನೇತ್ರಾವತಿ ನದಿ ಉಳಿಸಿ ಪಾದಯಾತ್ರೆ: ಮುಂಡಾಜೆಯಲ್ಲಿ 5 ಪಂಚಾಯತ್ ಗಳ ಸಮಾಲೋಚನಾ ಸಭೆ

0

ಮುಂಡಾಜೆ: ನೇತ್ರಾವತಿ ನದಿ ಉಳಿಸಿ ಹೋರಾಟ ಹಾಗೂ ತಾಲೂಕಿನ ಜನಪರ ವಿಚಾರಗಳ ಬಗೆಗಿನ ಹೋರಾಟದ ಬಗ್ಗೆ ಮುಂಡಾಜೆಯಿಂದ ಉಪ್ಪಿನಂಗಡಿವರೆಗೆ ಹಮ್ಮಿಕೊಳ್ಳಲಾಗಿರುವ ಮೂರು ದಿನದ ಕಾಲ್ನಡಿಗೆ ಹೋರಾಟ ಜಾಥಾದ ಬಗ್ಗೆ 5 ಗ್ರಾ.ಪಂ ಗಳ ಜನಪ್ರತಿನಿಧಿಗಳು, ಗ್ರಾಮದ ಪ್ರಮುಖರ ಸಮಾಲೋಚನಾ ಸಭೆಯು ಮುಂಡಾಜೆ ಗ್ರಾ.ಪಂ ಸಭಾಂಗಣದಲ್ಲಿ ಜರುಗಿತು.

ಜಾಥಾ ಮುಂಡಾಜೆ‌ ಗ್ರಾಮದ ಗಾಂಧಿ ಕಟ್ಟೆಯಿಂದ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಸ್ಥಾಪಕಧ್ಯಕ್ಷ , ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಪ್ರಸ್ತಾವನೆಗೈದರು. ಮುಂಡಾಜೆಯ ನಾಮದೇವ ರಾವ್ ಸ್ವಾಗತಿಸಿದರು.

ವೇದಿಕೆಯಲ್ಲಿ ಚಾರ್ಮಾಡಿ ಹಸನಬ್ಬ, ಸಂತೋಷ್ ಕುಮಾರ್ ವಳಂಬ್ರ, ಲೋಕೇಶ್ವರಿ ವಿನಯಚಂದ್ರ, ಅರೆಕ್ಕಲ್ ಮಮ್ಮಿಕುಂಞಿ, ನಾರಾಯಣ ಗೌಡ ದೇವಸ್ಯ, ಕೆ.ಯು ಮುಹಮ್ಮದ್ ಕಾಜೂರು, ವನಿತಾ ಕಡಿರುದ್ಯಾವರ, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಕೆ.ಸಿ ಪ್ರದೀಪ್, ಶಾಜಿ ತೋಪಿಲ್, ಕೂಳೂರು ಇಬ್ರಾಹಿಂ, ಸಿದ್ದೀಕ್ ಸಾಗರ್, ಹಮೀದ್ ನೆಕ್ಕರೆ, ಜೋನ್ ಕೆ.ಸಿ, ರಿಯಾಝ್ ಚಾರ್ಮಾಡಿ, ಇಬ್ರಾಹಿಂ ಮಸೀದಿಬಳಿ, ಪ್ರವೀಣ್ ಫೆರ್ನಾಂಡಿಸ್, ಶಾಹುಲ್ ಹಮೀದ್ ಕಿಲ್ಲೂರು, ಕಿಶೋರ್ ಕುಮಾರ್ ಕುರುಡ್ಯ, ಸತ್ಯನಾರಾಯಣ ಹೊಳ್ಳ‌ ಕಾನರ್ಪ, ಅಶೋರ್ ರೈ, ರೋಷನ್ ಅರಸಮಜಲು, ಹೈದರಾಲಿ ಕಾಜೂರು, ಯಶೋಧರ ಸುವರ್ಣ ಚಾರ್ಮಾಡಿ ಸೇರಿದಂತೆ,‌ ಮಲವಂತಿಗೆ,‌ ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ಮತ್ತು ಮುಂಡಾಜೆ ಗ್ರಾಮಸ್ಥರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here