ಸುಳ್ಯದಲ್ಲಿ ಮಹಾರ ಗೋಲ್ಡ್ & ಡೈಮಂಡ್ ಹಾಗೂ ಹೈಲೈಟ್ ಲ್ಯಾಂಪ್ಸ್ & ಅಪ್ಲೈಯನ್ಸ್ ಶುಭಾರಂಭ

0

 

ಬೆಳೆಯುತ್ತಿರುವ ಸುಳ್ಯಕ್ಕೆ ಹೈಫೈ ಲುಕ್ : ತಹಶೀಲ್ದಾರ್ ಅನಿತಾ ಲಕ್ಷ್ಮೀ

ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಇರುವ ಸುಳ್ಯ ಸೆಂಟರ್‌ನಲ್ಲಿ ಮಹಾರ ಗೋಲ್ಡ್ & ಡೈಮಂಡ್ಸ್ ಹಾಗೂ ಹೈಲೈಟ್ ಲ್ಯಾಂಪ್ಸ್ & ಅಪ್ಲೈಯನ್ಸ್
ಮಳಿಗೆಗಳ ಶುಭಾರಂಭ ಅ.೧೬ರಂದು ನಡೆಯಿತು.

 

ಮಹಾರ ಗೋಲ್ಡ್ ಮಳಿಗೆಯನ್ನು ಖ್ಯಾತ ಸಮಾಜ ಸೇವಕ ಗ್ಲೋಬಲ್ ಗೀವರ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಶಹಜಾನ್ ನಿಲಂಬೂರು ಉದ್ಘಾಟಿಸಿದರು.
ಮಹಾರ ಡೈಮಂಡ್ ಮತ್ತು ವಾಚ್ ವಿಭಾಗವನ್ನು ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮೀ ಉದ್ಘಾಟಿಸಿದರು.

ಹೈಲೈಟ್ ಲ್ಯಾಂಪ್ಸ್ & ಅಪ್ಲೈಯನ್ಸ್ ಮಳಿಗೆಯನ್ನು ಕೆವಿಜಿ ಅಕಾಡೆಮಿ ಅಪ್ ಲಿಬರಲ್ ಎಜ್ಯುಕೇಶನ್‌ನ ನಿರ್ದೇಶಕ ಅಕ್ಷಯ್ ಕೆ.ಸಿ.ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಸುಳ್ಯ ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ,ಸದಾಶಿವ, ನ.ಪಂ.ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಶ್ರೀಮತಿ ಫಮಿದಾ ಸಂಶುದ್ದೀನ್, ಸುದ್ದಿ ಚಾನೆಲ್‌ನ ಪೂಜಾಶ್ರೀ ವಿತೇಶ್ ಕೋಡಿ, ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಹಿಂದೂಸ್ಥಾನ್ ಪ್ರೋಮೋಟರ್‍ಸ್ & ಡೆವಲೆಂಪರ್‍ಸ್‌ನ ಅಡಳಿತ ನಿರ್ದೇಶಕ ಡಾ.ಮಹಮ್ಮದ್ ಪಾವೂರ್, ನ್ಯಾಯವಾದಿ ಅಬ್ಬೂಬ್ಬಕರ್ ಅಡ್ಕಾರ್, ಎಂಪಿಎಂಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ವರ್ತಕರ ಸಂಘದ ಕಾರ್ಯದರ್ಶಿ ಡಿ.ಎಸ್.ಗಿರೀಶ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದ ಕಟ್ಟೆ, ಸುನ್ನಿ ಮಹಲ್ ಪೆಡರೇಶನ್‌ನ ಅಧ್ಯಕ್ಷ ಹಮೀದ್ ಹಾಜಿ ಎಸ್.ಎ., ಪ್ರದಾನ ಕಾರ್ಯದರ್ಶಿ ತಾಜ್ ಮಹಮ್ಮದ್, ಹಾಜಿ ಅಬ್ಬೂಬ್ಬಕರ್ ಮಂಗಳಾ, ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ, ಸಂಪಾಜೆ ಗ್ರಾ.ಪಂ. ಸದಸ್ಯ ಅಬೂಸಾಲಿ, ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಪ್ರದಾನ ಕಾರ್ಯದರ್ಶಿ ಲತೀಪ್ ಹರ್ಲಡ್ಕ, ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಕೋಶಾಧಿಕಾರಿ ಎಸ್.ಪಿ.ಅಬ್ಬೂಬಕರ್, ಅನಿಲ್ ಪಾಪನ್, ನಿವೃತ್ತ ಯೋದ ಗೋಪಾಲನ್, ಯುವ ಉದ್ಯಮಿಗಳಾದ ಹಮೀದ್ ಕುತ್ತಮೊಟ್ಟೆ, ಕೆ.ಬಿ.ಇಬ್ರಾಹಿಂ, ರಹೀಮ್ ಬೀಜದಕಟ್ಟೆ, ಇಬ್ರಾಹಿಂ ಅಮಾನುಲ್ಲ, ಹೈಲೈಟ್ ಮೂಡಬಿದ್ರೆಯ ಮಾಲಕ ಅಶ್ರಫ್ ಅಹಮ್ಮದ್ , ನಜ್ಮುದೀನ್, ಶಫೀಕ್, ಮೂಸ ಅಹಮ್ಮದ್, ನ.ಪಂ.ಸದಸ್ಯರಾದ ರಿಯಾಜ್ ಕಟ್ಟೆಕ್ಕಾರ್, ಜೇಸಿ ಸುಳ್ಯ ಸಿಟಿ ಅಧ್ಯಕ್ಷ ಬಶೀರ್ ಯು.ಬಿ., ಉದ್ಯಮಿಗಳಾದ ಹಾಜಿ ಅಬ್ದುಲ್ ಹಮೀದ್, ಕಲ್ಲುಗುಂಡಿ ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸೆಂಟ್ಯಾರ್, ಸುಳ್ಯ ಅಲ್ಪಸಂಖ್ಯಾತರ ಸೊಸೈಟಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಸಿದ್ದಿಕ್ ಕಟ್ಟೆಕ್ಕಾರ್, ಹಾಜಿ ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಪತ್ರಕರ್ತ ಜೆ.ಕೆ.ರೈ, ಸತೀಶ್ ಹೊದ್ದೆಟ್ಟಿ, ಹಾಜಿ ಅಬ್ದುಲ್ ಹಮೀದ್ ಜನತಾ, ರಾಜಧಾನಿ ಜುವೆಲ್ಲರ್‍ಸ್ ಮಾಲಕ ರಜಾಕ್ ಹಾಜಿ , ಹಮೀದ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ, ಶೀತಲ್ ರಜಾಕ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಗಾಂಧಿನಗರ ಜುಮ್ಮಾಮಸೀದಿ ಅಧ್ಯಕ್ಷ ಹಾಜಿ ಕೆ,ಮುಸ್ತಾಫ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬಗ್ಗೆ ಪರಿಚಯಿಸಿದರು. ಸಂಸ್ಥೆಯ ಮಾಲಕರಾದ ಅಶ್ರಫ್ ಸುಂಕದಕಟ್ಟೆ, ನಝೀರ್ ಮಂಗಳೂರು, ಸಫ್ವಾನ್ ಫೈಝಿ ಸರ್ವರನ್ನು ಸ್ವಾಗತಿಸಿ, ಬರಮಾಡಿಕೊಂಡರು. ಹಕೀಂ ಬೆಳ್ಳಾರೆ, ನಝೀರ್ ಕಡಬ, ಕಮಾಲ್ ಕಡಬ್, ಸಿದ್ದೀಕ್ ಬಿಎಂಎ, ನೌಶದ್ ಕೆರೆಮೂಲೆ , ಹಾಜಿ ಅಬ್ದುಲ್ ಖಾದರ್ ಪಟೇಲ್ , ತಾಜುದ್ದೀನ್ ಮೊದಲಾದವರು ಸಹಕರಿಸಿದರು. ಪತ್ರಕರ್ತ ಶರೀಪ್ ಜಟ್ಟಿಪಳ್ಳ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಿಂದೂಸ್ಥಾನದ ಅಡಳಿತ ಪಾಲುದಾರರಾದ ಡಾ.ಮಹಮ್ಮದ್ ಪಾವೂರ್‌ರವರು ಮಹಾರ ಸಂಸ್ಥೆಯ ಅಶ್ರಫ್ ಹಾಗೂ ಹೈಲೈಟ್ ಸಂಸ್ಥೆಯ ನಝೀರ್‌ರವರನ್ನು ಸನ್ಮಾನಿಸಿ, ಗೌರವಿಸಿದರು.
ಹೈಲೈಟ್ ಸಂಸ್ಥೆಯ ಇಂಟಿರೀಯಲ್ ಕೆಲಸ ನಿರ್ವಹಿಸಿ ಪರಮೇಶ್ವರವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಮಹಾರ್ ಗೋಲ್ಡ್‌ನಲ್ಲಿ ಪ್ರಾರಂಬೋತ್ಸವದ ಪ್ರಯುಕ್ತ ವಿಶೇಷ ಅಫರ್‌ಗಳ ಕೊಡುಗೆಗಳನ್ನು ನೀಡಲಾಯಿತು. ಮಳಿಗೆಗೆ ಬೇಟಿ ಕೊಟ್ಟ ಪ್ರತೀ ಗ್ರಾಹಕರಿಗೆ ಅದೃಷ್ಟ ಡ್ರಾದ ಮೂಲಕ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು. ಚಿನ್ನಾಭರಣ ಖರೀದಿಯ ಮಜೂರಿಯಲ್ಲಿ ರಿಯಾಯಿತಿ ಹಾಗೂ ಮದುವೆ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಮಹಾರ ಸ್ವರ್ಣ ಸಮೃದ್ಧಿ ಮೂಲಕ ಗ್ರಾಹಕರಿಗೆ ತಿಂಗಳಲ್ಲಿ ಮಾಸಿಕ ಕಂತುಗಳ ಮೂಲಕ ಹಣ ಪಾವತಿಸಿ ಮಜೂರಿ ಇಲ್ಲದೇ ಅಭರಣ ಖರೀದಿಸುವ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಹೈಲೈಟ್ ಸಂಸ್ಥೆಯಲ್ಲಿ ಗ್ರಾಹಕರಿಗೆ ಬೇಕಾಗುವ ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸದ ಅಲಂಕಾರಿಕ ಲೈಟ್‌ಗಳು, ಮನೆ, ಕಛೇರಿ, ಕಟ್ಟಡ, ಗಾರ್ಡನ್, ಒಳಾಂಗಣ ಮತ್ತು ಹೊರಂಗಣಕ್ಕೆ ಬೇಕಾಗುವ ಶೋ ಲೈಟ್‌ಗಳು ಹಾಗೂ ಇನ್ನಿತ್ತರ ಲೈಟ್, ಡೆಕೋರೇಶನ್ ಬಲ್ಬ್‌ಗಳು, ಗಾರ್ಡನ್ ಲೈಟ್‌ಗಳು ಶುಭಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ನೀಡಲಾಗುವುದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
ಇದು ಸಂಸ್ಥೆಯ ಎಂಟನೇ ಮಳಿಗೆಯಾಗಿ ಸುಳ್ಯದಲ್ಲಿ ಪ್ರಾರಂಭಗೊಂಡಿದೆ.

LEAVE A REPLY

Please enter your comment!
Please enter your name here