ದೊಡ್ಡ ಕರುಳು ಹಾಗೂ ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಖಾಸಗಿ ಕಾಲೇಜಿನ ಉಪನ್ಯಾಸಕ ನಂದಕುಮಾ‌ರ್ ರವರ ಚಿಕಿತ್ಸೆಗೆ ನೆರವಾಗಿ

0

ಬೆಳ್ತಂಗಡಿ: ಖಾಸಗಿ ಕಾಲೇಜಿನ ಉಪನ್ಯಾಸಕರೋರ್ವರು ಕಳೆದ ಅನೇಕ ದಿನಗಳಿಂದ ದೊಡ್ಡ ಕರಳು ಹಾಗು ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಾ ಮಂಗಳೂರು ಕೆ ಎಂ ಸಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗಾಗಿ ಸಾರ್ವಜನಿಕರ ಸಹಾಯಧನವನ್ನು ಯಾಚಿಸಿದ್ದಾರೆ.

ಪುದುವೆಟ್ಟು ಗ್ರಾಮದ ನಂದಕುಮಾರ್ (40ವ) ಈ ಕಾಯಿಲೆಯಿಂದ ಬಳಲುತ್ತಿರುವವರು. ವೃತ್ತಿಯಲ್ಲಿ ಉಪನ್ಯಾಸಕರಾಗಿ ಖಾಸಗಿ ಕಾಲೇಜಿನಲ್ಲಿ ದುಡಿಯುತ್ತಿರುವ ಇವರು ತೀರಾ ಬಡ ಕುಟುಂಬದವರು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಾ ಬಂದ ಆದಾಯದಲ್ಲಿ ಅಪ್ಪ ಅಮ್ಮ ಹೆಂಡತಿ ಹಾಗೂ 3 ಮತ್ತು 6 ವರ್ಷದ 2 ಹೆಣ್ಣು ಮಕ್ಕಳ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಇದೀಗ ತನ್ನ ಪಾಲಿಗೆ ಬಂದ ಕಾಯಿಲೆಯಿಂದಾಗಿ ಇಡೀ ಕುಟುಂಬವೇ ದಿಕ್ಕು ಕಾಣದಂತಾಗಿದೆ.

ಈಗಾಗಲೇ 5 ಲಕ್ಷ ಕ್ಕೂ ಹೆಚ್ಚಿನ ಹಣ ಖರ್ಚಾಗಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಗೆ 6 ರಿಂದ 8 ಲಕ್ಷಕ್ಕೂ ಅಧಿಕ ಹಣ ಬೇಕಾಗಿದೆ. ಒಂದೆಡೆ ಕಾಯಿಲೆ, ಇನ್ನೊಂದೆಡೆ ಕುಟುಂಬ ನಿರ್ವಹಣೆ ಈ ಎಲ್ಲದರ ಮಧ್ಯೆ ನಿತ್ಯ ಕಣ್ಣೀರನ್ನು ಸುರಿಸಬೇಕಾದ ಸ್ಥಿತಿಯಲ್ಲಿ ಈ ಕುಟುಂಬವಿದೆ. ಕುಟುಂಬಕ್ಕೆ ಆದಾಯ ಮೂಲವಾಗಿದ್ದ ನಂದಕುಮಾ‌ರ್ ಕಳೆದ 2 ತಿಂಗಳಿನಿಂದ ಆಸ್ಪತ್ರೆಯಲ್ಲೇ ಇರುವಂತಾಗಿದೆ. ಈಗಾಗಲೇ ಖರ್ಚಾದ ಸುಮಾರು 5 ಲಕ್ಷ ದ ಚಿಕಿತ್ಸಾ ವೆಚ್ಚಕ್ಕೆ ಅವರ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಊರಿನ ಅನೇಕ ದಾನಿಗಳು ಸಹಾಯ ಹಸ್ತ ನೀಡಿದ್ದು ಇನ್ನುಳಿದ ಚಿಕಿತ್ಸೆಯ ಖರ್ಚಿಗೆ ದಾನಿಗಳ ನೆರವು ಇಡೀ ಕುಟುಂಬವೇ ಬಯಸುತ್ತಿದೆ.

ಸಹಾಯಧನ ನೀಡುವವರು ಅವರ ಪತ್ನಿ ದಿವ್ಯಾ ನಂದಕುಮಾರ್ ಅವರ ಗೂಗಲ್ ಪೇ ನಂಬರ್ 94811 65791 ಅಥವಾ ದಿವ್ಯಾ ಕೆ ಜೆ ಹೆಸರಿನಲ್ಲಿರುವ ಬ್ಯಾಂಕ್ ಆಫ್ ಬರೋಡ ಖಾತೆ ಸಂಖ್ಯೆ 45150100005291(IFSC CODE – BARBOVJBTHA) ಕಳುಹಿಸಿಕೊಡುವಂತೆ ವಿನಂತಿಯನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here