ಬೆಳ್ತಂಗಡಿ: ಗಾಂಧಿ ಜಯಂತಿ ಪ್ರಯುಕ್ತ ಡಿ.ಕೆ.ಆರ್.ಡಿ.ಎಸ್. ವತಿಯಿಂದ ಶ್ರಮದಾನ ಕಾರ್ಯಕ್ರಮ

0

​ಬೆಳ್ತಂಗಡಿ: ಗಾಂಧಿ ಜಯಂತಿಯ ವಿಶೇಷ ದಿನದ ಅಂಗವಾಗಿ ಡಿ.ಕೆ.ಆರ್.ಡಿ.ಎಸ್. (ರಿ.) ಬೆಳ್ತಂಗಡಿ ವತಿಯಿಂದ ಅಕ್ಟೋಬರ್ 2, 2026 ರಂದು ಉದಯ ಮಹಾಸಂಘ ಗಂಡಿಬಾಗಿಲು ಸಹಯೋಗದೊಂದಿಗೆ, ನೆರಿಯ ನಿವಾಸಿ ರೇಣುಕಾ ಎಂಬವರ ಮನೆ ನಿರ್ಮಾಣ ಕಾರ್ಯಕ್ಕಾಗಿ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.​

ಊರ ಹಾಗೂ ಪರ ಊರಿನ ದಾನಿಗಳ ಉದಾರ ಸಹಕಾರದೊಂದಿಗೆ ಉದಯ ಮಹಾಸಂಘ ಗಂಡಿಬಾಗಿಲು ಇದರ ನೇತೃತ್ವದಲ್ಲಿ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಸಮಾಜಮುಖಿ ಕಾರ್ಯದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಪದಾಧಿಕಾರಿಗಳು, ಅರುಣೋದಯ ಮಹಾಸಂಘ ಬೆಳ್ತಂಗಡಿ, ಚೈತನ್ಯ ಮಹಾಸಂಘ ತೋಟತ್ತಾಡಿ ಹಾಗೂ ಉದಯ ಮಹಾಸಂಘ ಗಂಡಿಬಾಗಿಲಿನ ಸುಮಾರು 60ಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ಮಾಡಿದರು.​

ಈ ಕಾರ್ಯಕ್ರಮದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಆದರ್ಶ್ ಪಿ.ಎಸ್. ಹಾಗೂ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದು, ಶ್ರಮದಾನದಲ್ಲಿ ತೊಡಗಿಸಿಕೊಂಡು ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಿದರು.

LEAVE A REPLY

Please enter your comment!
Please enter your name here