






ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸೇವಾ ಸಂಕಲ್ಪ ಅಭಿಯಾನ’ದ ಪ್ರಯುಕ್ತ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ‘ವಿಕಸಿತ ಭಾರತ- 2047: ನನ್ನ ಕನಸಿನ ಭಾರತ’ ಕುರಿತಾದ ಬೆಳ್ತಂಗಡಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವೇಣೂರು ಇಲ್ಲಿಯ ವಿದ್ಯಾರ್ಥಿನಿ ಧನುಶ್ರೀ ಎಸ್ ಕುಲಾಲ್ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.


ವಿಜೇತ ವಿದ್ಯಾರ್ಥಿನಿಯು ಪ್ರಶಸ್ತಿಯಾಗಿ ರೂ. 10,000 ನಗದು ಹಾಗೂ ಶಾಶ್ವತ ಫಲಕವನ್ನು ಪಡೆದು ಕಾಲೇಜಿಗೆ ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.









