






ಬೆಳ್ತಂಗಡಿ: ಖಾಸಗಿ ಬಸ್ನಲ್ಲಿ ವಿದ್ಯಾರ್ಥಿನಿಗೆ ತನ್ನ ಗುಪ್ತಾಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಲ್ಲೇರಿಯ ಅಬುಸಾಲಿ ಅವರ ಪುತ್ರ ಇರ್ಫಾನ್(೩೨) ಎಂಬಾತನನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ತಾನು ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು-ವಿಟ್ಲ ನಡುವಿನ ಸೆಲೆನಾ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ತನ್ನ ಗುಪ್ತಾಂಗ ತೋರಿಸಿ ಇರ್ಫಾನ್ ವಿಕೃತಿ ಮೆರೆದಿದ್ದ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಗುಪ್ತವಾಗಿ ತನ್ನ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿದ್ದರು. ನಂತ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಬಳಿಕ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸರು ಇರ್ಫಾನ್ ಸೆಲೆನಾ ಬಸ್ ಕಂಡಕ್ಟರ್ ಆಗಿದ್ದು ಜು.ರಂದು ಸಂಜೆ ೫ ಗಂಟೆಗೆ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶನ ಮಾಡಿ ಅಸಭ್ಯವಾದ ಸನ್ನೆಯನ್ನು ಮಾಡಿ ಹಿಂದಿನ ಸೀಟಿಗೆ ಬಾ ಎಂದು ವಿದ್ಯಾರ್ಥಿನಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಜು.೧೦ರಂದು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂಲತಃ ಕಲ್ಲೇರಿ ನಿವಾಸಿಯಾದ ಇರ್ಫಾನ್ ಪ್ರಸ್ತುತ ಉಪ್ಪಿನಂಗಡಿ ಸಮೀಪದ ಕರ್ವೇಲು ಎಂಬಲ್ಲಿ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ.


ಕುಡಿತದ ನಶೆಯಲ್ಲೇ ಡ್ಯೂಟಿಗೆ ಬಂದಿದ್ದ: ಇರ್ಫಾನ್ ನಾಲ್ಕೈದು ಖಾಸಗಿ ಬಸ್ಸುಗಳಲ್ಲಿ ಬದಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಹೊಂದಿದ್ದ ಈತನ ಕಾಟ ತಡೆಯಲಾರದೆ ಪತ್ನಿ ಮತ್ತು ಮಕ್ಕಳು ಈತನನ್ನು ತೊರೆದು ಹೋಗಿದ್ದಾರೆ. ತನ್ನ ಅಸಭ್ಯ ವರ್ತನೆಯ ವೀಡಿಯೋ ವೈರಲ್ ಆಗಿ ಪೊಲೀಸ್ ದೂರು ದಾಖಲಾಗಿರುವ ವಿಷಯ ತಿಳಿದಿದ್ದರೂ ಈತ ಪೂರ್ಣ ಕುಡಿತದ ನಶೆಯಲ್ಲಿ ಡ್ಯೂಟಿ ಮಾಡಲು ಬಂದಿದ್ದ. ಈತನ ಸ್ಥಿತಿ ಕಂಡು ಸಹೋದ್ಯೋಗಿ ಕಂಡೆಕ್ಟರ್ ಒಬ್ಬರು, ಇವತ್ತು ಡ್ಯೂಟಿ ನಾನು ಮಾಡಬೇಕಾ ? ಎಂದು ಕೇಳಿದರೂ ತಾನು ಸರಿಯಾಗಿಯೇ ಇzನೆ ಎಂದು ತೋರ್ಪಡಿಸಿಕೊಂಡು ಡ್ಯೂಟಿ ಮಾಡಿದ್ದ ಎಂದು ತಿಳಿದು ಬಂದಿದೆ.
ಬಾರ್ನಲ್ಲಿ ಮದ್ಯ ಹೀರುತ್ತಿದ್ದಾಗ ಪೊಲೀಸರ ದಾಳಿ: ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ಈತ ಕರ್ತವ್ಯ ನಿರ್ವಹಿಸುತ್ತಿದ್ದ ಸೆಲೆನಾ ಬಸ್ಸು ಸಂಜೆ ೪ ಗಂಟೆಗೆ ಬರುವುದನ್ನೇ ಕಾಯುತ್ತಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದರು. ಈ ವೇಳೆ ಇರ್ಫಾನ್ ತನ್ನಲ್ಲಿದ್ದ ಕಲೆಕ್ಷನ್ ಹಣದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಮೀಪದ ರಾಜೇಶ್ ಬಾರ್ನಲ್ಲಿ ಮದ್ಯ ಸೇವಿಸುತ್ತಿದ್ದ ಇರ್ಫಾನ್ನನ್ನು ಅಲ್ಲಿಂದಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.









