ವಾಸ್ತವ ವಿಚಾರ ತಿರುಚಿ ಸುದ್ದಿ ಬಿಡುಗಡೆ ವಿರುದ್ಧ ಅಪಪ್ರಚಾರ ನಡೆಸಿದ್ದ ಪ್ರಕರಣ-ಜನತಾ ಏಜೆಂಟ್ ಯೂಟ್ಯೂಬ್ ಚಾನೆಲ್‌ನ ಅಬೂಬಕ್ಕರ್ ಸಿದ್ದೀಕ್‌ನಿಂದ ಕ್ಷಮೆಯಾಚನೆ

0

ಬೆಳ್ತಂಗಡಿ: ವಾಸ್ತವ ವಿಚಾರವನ್ನು ತಿರುಚಿ ಸುದ್ದಿ ಬಿಡುಗಡೆ ಪತ್ರಿಕೆ' ಮತ್ತುಸುದ್ದಿ ಯೂ ಟ್ಯೂಬ್ ಚಾನೆಲ್’ ಕುರಿತು ಅಪಪ್ರಚಾರ ನಡೆಸಿದ್ದ ಜನತಾ ಏಜೆಂಟ್’ ಯೂ ಟ್ಯೂಬ್ ಚಾನೆಲ್‌ನ ಅಬೂಬಕ್ಕರ್ ಸಿದ್ದೀಕ್ ಎಂಬವರು ಕ್ಷಮೆ ಯಾಚಿಸಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಎದುರು ವಿಚಾರಣೆಗೆ ಹಾಜರಾಗಿದ್ದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಸಮೀಪದ ಅಬೂಬಕ್ಕರ್ ಸಿದ್ದೀಕ್ ಅವರುನನ್ನಿಂದ ಪ್ರಮಾದವಾಗಿದೆ. ತಪ್ಪು ಮಾಹಿತಿಯಿಂದ ಈ ರೀತಿಯಾಗಿದೆ. ಸತ್ಯ ವಿಚಾರ ಗೊತ್ತಾದ ಕೂಡಲೇ ನನ್ನ ಜನತಾ ಏಜೆಂಟ್ ಯೂ ಟ್ಯೂಬ್ ಚಾನೆಲ್‌ನಲ್ಲಿ ಸುದ್ದಿ ಬಿಡುಗಡೆ ಕುರಿತು ಪ್ರಕಟಿಸಿದ್ದ ವರದಿಯನ್ನು ಅಳಿಸಿ ಹಾಕಿzನೆ. ಇನ್ನು ಮುಂದೆ ಈ ರೀತಿ ಪ್ರಮಾದ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತೇನೆ’ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಘಟನೆಯ ವಿವರ: ಕಳೆದ ೪೦ ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ತಾಲೂಕಿನಲ್ಲಿ ಅತೀ ಹೆಚ್ಚು ಪ್ರಸಾರ ಹೊಂದಿರುವ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯ ವಿರುದ್ಧ ದುರುzಶಪೂರ್ವಕವಾಗಿ ವಾಸ್ತವ ವಿಚಾರವನ್ನು ತಿರುಚಿ ಜನತಾ ಏಜೆಂಟ್’ ಯೂ ಟ್ಯೂಬ್ ಚಾನೆಲ್‌ನಲ್ಲಿ ಅಪಪ್ರಚಾರ ನಡೆಸಲಾಗಿತ್ತು. ಬೆಳ್ತಂಗಡಿಯಲ್ಲಿ ನಡೆದಿದ್ದಕೊಂದವರು ಯಾರು-ನ್ಯಾಯ ಧರ್ಮಕ್ಕಾಗಿ ಆಗ್ರಹಿಸಿ ಮಹಿಳಾ ಸಮಾವೇಶ-ಜಾಥಾಎಂಬ ಹೆಸರಿನ ಕಾರ್ಯಕ್ರಮದ ಕುರಿತು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿದ್ದರೂ, ಸುದ್ದಿ ಬಿಡುಗಡೆಯಲ್ಲಿ ಈ ಕಾರ್ಯಕ್ರಮದ ವರದಿಯನ್ನು ಪ್ರಕಟಿಸಿಲ್ಲ ಎಂದುಜನತಾ ಏಜೆಂಟ್’ ಎಂಬ ಯೂ ಟ್ಯೂಬ್ ಚಾನೆಲ್‌ನಲ್ಲಿ ಅಪಪ್ರಚಾರ ನಡೆಸಲಾಗಿತ್ತು. ಅಲ್ಲದೆ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಬಹಿಷ್ಕರಿಸಬೇಕು ಎಂದು ವರದಿಯಲ್ಲಿ ಕರೆ ನೀಡಲಾಗಿತ್ತು. ಈ ಕುರಿತು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಆರಂಭದಲ್ಲಿ ಯಾವುದೇ ಕಾನೂನು ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂತೋಷ್ ಕುಮಾರ್ ಅವರು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದರು. ತಕ್ಷಣ ಸ್ಪಂದಿಸಿದ್ದ ಎಸ್‌ಪಿಯವರು ಈ ಕುರಿತು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿಯವರಿಗೆ ಸೂಚನೆ ನೀಡಿದ್ದರು.

ಬಳಿಕ ಪೊಲೀಸ್ ಠಾಣಾಧಿಕಾರಿಯವರು ಜನತಾ ಏಜೆಂಟ್’ ಯೂ ಟ್ಯೂಬ್ ಚಾನೆಲ್ ನಡೆಸುತ್ತಿರುವ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಸಮೀಪದ ಅಬೂಬಕ್ಕರ್ ಸಿದ್ದೀಕ್ ಎಂಬವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಎದುರು ವಿಚಾರಣೆಗೆ ಹಾಜರಾದ ಅಬೂಬಕ್ಕರ್ ಸಿದ್ದೀಕ್ ಅವರು ಕ್ಷಮೆಯಾಚಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಅವರು ಅಬೂಬಕ್ಕರ್ ಸಿದ್ದೀಕ್‌ನನ್ನು ತೀವ್ರ ತರಾಟೆಗೆತ್ತಿಕೊಂಡಿದ್ದು ಸುಳ್ಳು ವರದಿ ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ತನ್ನಿಂದ ಈ ವಿಚಾರದಲ್ಲಿ ಪ್ರಮಾದವಾಗಿದೆ. ಅರಿವಿಗೆ ಬಾರದೆ ಈ ರೀತಿಯಾಗಿದೆ. ತಪ್ಪು ಉಂಟಾಗಿರುವುದು ಗಮನಕ್ಕೆ ಬಂದ ಕೂಡಲೇ ಯೂ ಟ್ಯೂಬ್ ಚಾನೆಲ್‌ನಿಂದ ಆ ವರದಿಯನ್ನು ಡಿಲಿಟ್ ಮಾಡಿzನೆ. ಮುಂದಕ್ಕೆ ಈ ರೀತಿ ಪ್ರಮಾದ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಮುಂದಕ್ಕೆ ಈ ರೀತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ನೀಡಿದ್ದಾರೆ. ಜತೆಗೆ ಸುದ್ದಿ ಬಿಡುಗಡೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಅವರಿಗೆ ದೂರವಾಣಿ ಕರೆ ಮಾಡಿನನ್ನಿಂದ ತಪ್ಪಾಗಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಅಬೂಬಕ್ಕರ್ ಸಿದ್ದೀಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here