ಕಲ್ಲೇರಿ ಜನತಾ ಕಾಲೋನಿಯ ಮುಸ್ತಾಕ್ ಶವ ಗುರುವಾಯನಕೆರೆ ಶಕ್ತಿನಗರದಲ್ಲಿ ಪತ್ತೆಯಾದ ಪ್ರಕರಣ-ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿರುವ ಪೊಲೀಸರು-ಕೊಲೆ ಮಾಡಲಾಗಿದೆ: ತಂದೆ, ಸಹೋದರ ಹೇಳಿಕೆ

0

ಬೆಳ್ತಂಗಡಿ: ಗುರುವಾಯನಕೆರೆಯ ಶಕ್ತಿನಗರದ ಏನಪೋಯ ಎಲೆಕ್ಟ್ರಿಕ್ ಸಬ್ ಸ್ಟೇಷನ್ ಸಮೀಪದ ಪೊದೆಯಲ್ಲಿ ಜು.೧ರಂದು ಕಲ್ಲೇರಿ ಜನತಾ ಕಾಲೋನಿಯ ಮುಸ್ತಾಕ್ (೨೭) ಎಂಬವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಮುಸ್ತಾಕ್ ಅವರ ಸಾವಿನ ಕುರಿತು ಅವರ ತಂದೆ ಷರೀಫ್ ಅವರು ನೀಡಿರುವ ದೂರಿನಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಠಾಣಾ ಪೊಲೀಸರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಸಲಿದ್ದಾರೆ. ಈ ಮಧ್ಯೆ ಮುಸ್ತಾಕ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಅವರ ತಂದೆ ಷರೀಫ್ ಮತ್ತು ಸಹೋದರ ಮುನಾಸಿರ್ ಆರೋಪಿಸಿದ್ದಾರೆ.
ಕೊಲೆ ಮಾಡಿ ಬಿಸಾಡಿದ್ದಾರೆ-ಷರೀಫ್: ಮುಸ್ತಾಕ್ ಅವರ ಸಾವಿನ ಕುರಿತು ಸುದ್ದಿಯೊಂದಿಗೆ ಮಾತನಾಡಿದ ಮುಸ್ತಾಕ್ ಅವರ ತಂದೆ ಷರೀಫ್ ಅವರು ನನ್ನ ಮಗನನ್ನು ಕೊಲೆ ಮಾಡಿ ತಂದು ಅಲ್ಲಿ ಬಿಸಾಕಿದ್ದಾರೆ. ಅಂತವರಿಗೆ ಗಲ್ಲು ಶಿಕ್ಷೆ ಕೊಡಬೇಕು. ಅಂತವರು ಇರಬಾರದು ಲೋಕದಲ್ಲಿ. ನಾವು ಎಷ್ಟು ಕಷ್ಟಪಟ್ಟು ಮಕ್ಕಳನ್ನು ಸಾಕಿzವೆ ಅಂತ ಅವರಿಗೆ ಗೊತ್ತಾಗಲ್ಲ. ಕೆಲಸಕ್ಕೆ ಅಂತ ರಾತ್ರಿ ಮನೆಯಿಂದ ಹೊರಟ ಆತನನ್ನು ನನ್ನ ಚಿಕ್ಕ ಮಗ ಹೋಗಿ ಬಿಟ್ಟು ಬಂದಿದ್ದ. ಬೆಳಗ್ಗೆ ನನ್ನ ಭಾವ ಕರೆ ಮಾಡಿ ಮುಸ್ತಾಕ್ ತೀರಿ ಹೋಗಿದ್ದಾನೆ ಅಂತ ಹೇಳಿದ್ದರು. ಮುಸ್ತಾಕ್ ಯಾರಿಗೂ ಅನ್ಯಾಯ ಮಾಡಿದವನಲ್ಲ. ಯಾರು ನೆರವು ಕೇಳಿದರೂ ಓಡಿ ಹೋಗಿ ನೆರವು ನೀಡುತ್ತಿದ್ದ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಅವರು ಇನ್ನು ಯಾರ ಮಕ್ಕಳಿಗೂ ಕೂಡ ಹೀಗೆ ಮಾಡಬಾರದು. ತುರ್ತು ಸಂದರ್ಭದಲ್ಲಿ ಆತನ ನೆರವಾಗಲು ಸಿದ್ಧನಿರುವವನು. ಯಾರಿಗೂ ನೋವು ಮಾಡುವ ಜನ ಅಲ್ಲ. ಮನೆಗೆ ದುಡಿದು ನೆರವು ನೀಡುತ್ತಾ ಇದ್ದ. ನಾನು ತೆಂಗಿನ ಮರದಿಂದ ಬಿದ್ದು ದುಡಿಯಲು ಆಗುವುದಿಲ್ಲ. ಮಕ್ಕಳು ಬೆಳೆದಾಗ ಹೀಗೆ ಮಾಡಿದ್ದಾರೆ. ಇದು ಕೊಲೆ ಅಂತ ನಾವು ಹೇಳಿzವೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಗಾಡಿ ಓನರ್ ಸಲೀಂ ಅಂತಿದ್ದಾರೆ ಅವರನ್ನು ವಿಚಾರಿಸಬೇಕು ಎಂದು ಹೇಳಿದ್ದಾರೆ.

ಯಾತಕ್ಕಾಗಿ ಕೊಲೆ ಮಾಡಿದ್ದಾರೆ ಗೊತ್ತಾಗಬೇಕು-ಮುನಾಸಿರ್: ಮುಸ್ತಾಕ್ ಅವರ ಸಹೋದರ ಮುನಾಸಿರ್ ಮಾತನಾಡಿ ತುಂಬಾ ಸಮಯದಿಂದ ರಾತ್ರಿ ಕೆಲಸಕ್ಕೆಂದು ಹೋಗುತ್ತಾರೆ. ಬೆಳಗ್ಗೆ ಬಂದು ಮನೆಗೆ ಮುಟ್ಟುತ್ತಾರೆ. ಅದೇ ರೀತಿ ರಾತ್ರಿ ೧೦.೩೦ಕ್ಕೆ ಅವರ ಗಾಡಿ ಓನರ್ ಮನೆ ಪಕ್ಕ ಮದ್ದಡ್ಕಕ್ಕೆ ಡ್ರಾಪ್ ಮಾಡಿzನೆ. ನನ್ನ ಡಿಯೋ ಗಾಡಿ ಮದ್ದಡ್ಕದಲ್ಲಿ ಇಟ್ಟು ಬರುವಾಗ ಅದನ್ನು ತಾ ಅಂತ ಹೇಳಿ ಬಂದಿzನೆ. ನನ್ನ ಗೆಳೆಯರಿಬ್ಬರು ಗುರುವಾಯನಕೆರೆಗೆ ಬೆಂಗಳೂರಿನಿಂದ ಬಂದಿದ್ದರು. ಅವರೊಂದಿಗೆ ಮಾತನಾಡುತ್ತಾ ಅಲ್ಲೇ ನಾನು ಇದ್ದೆ. ಬೆಳಗ್ಗೆ ೪.೩೦ರವರೆಗೆ ಅಲ್ಲೇ ಇದ್ದೆ. ಬೆಳಗ್ಗೆ ನಾನು ಕಾಲ್ ಮಾಡಿದ್ದೆ. ಆಗ ಸ್ವಿಚ್ಛ್ ಆಫ್ ಇತ್ತು. ಗಾಡಿ ಓನರ್‌ಗೂ ಕಾಲ್ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ. ಮಧ್ಯಾಹ್ನ ೨.೩೦ರ ಸುಮಾರಿಗೆ ಮುಸ್ತಾಕ್ ತೀರಿ ಹೋಗಿದ್ದಾರೆ ಅನ್ನುವುದು ತಿಳಿಸಿದ್ದರು. ಸುನಾಮಿ ಬರುತ್ತಿದೆ ಅಂತ ಅಂದ್ರೆ ಅದರ ಎದುರೇ ಹೋಗುವ ಧೈರ್ಯ ಇರುವವನು. ಅವನು ಶವವಾಗಿ ಆ ರೀತಿ ಬೀಳುವವನೇ ಅಲ್ಲ. ಅವನ ಶವ ಹೇಗೋ ಇರಬೇಕಿತ್ತು. ಕೆಲಸಕ್ಕೆ ಲತೀಫ್ ಕಾಶಿಪಟ್ಣ ಅವರಲ್ಲಿ ಹೋಗುತ್ತಾ ಇದ್ದಿದ್ದು. ಘಟನಾ ಸ್ಥಳದಲ್ಲಿ ಎರಡು ಚಪ್ಪಲಿ ಇದೆ. ಬಿದ್ದಿರುವುದಾದರೇ ಅವನನ್ನು ಎತ್ತಲೇಬೇಕಿತ್ತಲ್ವ. ಇದು ಕೊಂದಿರುವುದು. ಅವರು ಓಡಿಸುವ ಗಾಡಿ ಮೂಡಬಿದ್ರೆ ಸಾಣೂರು ಕಡೆಯಲ್ಲಿ ಇತ್ತಂತೆ. ಮದ್ದಡ್ಕದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅಣ್ಣನ ಶವ ಸಿಕ್ಕಿದೆ. ಆತನ ಪರ್ಸ್ ಎಲ್ಲಾ ಗಾಡಿಯಲ್ಲಿ ಇತ್ತು ಅಂತ ಹೇಳುತ್ತಾ ಇದ್ದರು, ನನಗೆ ಗೊತ್ತಿಲ್ಲ. ಗಾಡಿಯಲ್ಲಿ ಕೈ ಹಿಡಿಯುವುದು ಎಲ್ಲಾ ತುಂಡಾಗಿದೆ ಅಂತ ಹೇಳುತ್ತಾ ಇದ್ದರು. ನನಗೆ ಸರಿಯಾಗಿ ಗೊತ್ತಿಲ್ಲ. ಆತ ತಂದೆಯ ಸ್ಥಾನದಲ್ಲಿದ್ದಾನೆ. ಅವನು ನನಗೆ ಎರಡನೇ ತಂದೆಯಾಗಿದ್ದಾನೆ.

ಅವನನ್ನೇ ಈ ರೀತಿ ಮಾಡಿರುವುದು ನಿಜಕ್ಕೂ ಘನಘೋರ. ಪ್ಲಾಂಟ್ ನಲ್ಲಿ ಯಾರೆಲ್ಲ ಇದ್ದರು ಗೊತ್ತಾಗಬೇಕು. ಹ್ಯಾಂಡ್ ವಾಶ್ ಮಾಡುವ ಜಾಗದಲ್ಲಿ ಶವ ಇದೆ. ಬೆಳಗ್ಗೆ ೧೧ ಗಂಟೆವರೆಗೆ ಯಾರೂ ಆ ಕಡೆಗೆ ಹೋಗಿಲ್ಲವಾ. ಅವನೇ ಹೋಗಿದ್ದಾನೆ,ಶಾಕ್ ಹೊಡೆದಿದೆ ಅಂತ ಹೇಳುವ ಜಾಗ ಅದಲ್ಲ. ಕಾಲು, ಬಾಡಿ ನೆಲಕ್ಕೆ ಬಿದ್ದಿದೆ. ಕುತ್ತಿಗೆ ಮೇಲಿದೆ. ತನಿಖೆ ಸರಿಯಾಗಿ ನಡೆಯಬೇಕು. ನಾನು ಡ್ರಾಪ್ ಮಾಡಿದ್ದರಿಂದಲೇ ತನಿಖೆ ಮಾಡಬೇಕು. ಯಾತಕ್ಕಾಗಿ ಕೊಲೆ ಮಾಡಿದ್ದಾರೆ ಗೊತ್ತಾಗಬೇಕು. ಅನ್ಯಾಯದ ವಿಚಾರದಲ್ಲಿ ಕೊಲೆ ಆಗಿರಲು ಸಾಧ್ಯವಿಲ್ಲ. ಮನೆಯಲ್ಲಿ ಕಾರ್ಯಕ್ರಮ ಇದ್ದರೂ ಇತರರಿಗೆ ಉಪಕಾರ ಮಾಡಲು ಹೊರಟು ಹೋಗುವವನು ಆತ. ನಾನು ನನ್ನ ಫ್ರೆಂಡ್ ಸಚಿನ್ ಅಂತ ಮೂವರು ಒಟ್ಟಿಗೆ ಹೋಗಿ ಡ್ರಾಪ್ ಮಾಡಿ ನಾವಿಬ್ಬರು ವಾಪಸ್ ಬಂದಿzವೆ. ಲತೀಫ್ ಅವರಲ್ಲಿ ವಿಚಾರಿಸಬೇಕು. ಗಾಡಿ ಓನರ್ ಸಲೀಂ ಕೂಡ ಅಪ್‌ಸೆಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here