






ಬೆಳ್ತಂಗಡಿ:ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಇದರ ನಿರ್ದೇಶಕರುಗಳಾದ ಹಾಗೂ ಪ್ರಸ್ತುತ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಸಂಚಲಕರಾಗಿ ಆಯ್ಕೆಯಾದ ಜಯರಾಮ ಭಂಡಾರಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಇವರುಗಳಿಗೆ ವಿಜಯ ಕ್ರೆಡಿಟ್ ಕೋ-ಆಪರೇಟ್ ಸೊಸೈಟಿ ನಿ. ಗುರುವಾಯನಕೆರೆ ಇದರ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಲಾಯಿತು.



ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ, ಉಪಾಧ್ಯಕ್ಷ ಜಯಂತ್ ಶೆಟ್ಟಿ, ಹಿರಿಯ ನಿರ್ದೇಶಕರಾದ ಸೀತಾರಾಮ ಶೆಟ್ಟಿ, ರಘುರಾಮ್ ಶೆಟ್ಟಿ, ಕೃಷ್ಣ ರೈ, ಪುರಂದರ ಶೆಟ್ಟಿ, ಮಂಜುನಾಥ್ ರೈ, ರಾಜು ಶೆಟ್ಟಿ, ಬಾಲಕೃಷ್ಣ ಪೂಂಜಾ, ಸಾರಿಕ ಡಿ. ಶೆಟ್ಟಿ, ವಿಜಯ ಶೆಟ್ಟಿ , CEO ಸುಜಯ್ ಶೆಟ್ಟಿ ಉಪಸ್ಥಿತರಿದ್ದರು.









