ಜೂನ್ 28 ರಂದು ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ: ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮೂರು ಕಡೆ ಸಮಾರಂಭ

0

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಸಮಾರಂಭವನ್ನು ಜೂನ್ 28ರ ಆದಿತ್ಯವಾರ ಹಮ್ಮಿಕೊಳ್ಳಲಾಗಿದೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಒಟ್ಟು ಮೂರು ವಿವಿಧ ಕೇಂದ್ರಗಳಲ್ಲಿ ಈ ಕಾರ್ಯಕ್ರಮಗಳು ಜರುಗಲಿವೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳನ್ನು ಆಧರಿಸಿ ಮೂರು ಪ್ರತ್ಯೇಕ ಸಮಯ ಹಾಗೂ ಸ್ಥಳಗಳಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ:

1. ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಸಮಯ: ಪೂರ್ವಾಹ್ನ 9:00 ಗಂಟೆಗೆಸ್ಥಳ: ಸ್ವರಾಜ್ ಟವರ್ಸ್ ಸಭಾಭವನ, ಅಳದಂಗಡಿಒಳಪಡುವ ಗ್ರಾಮಗಳು: ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಸುಲ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು, ತೆಂಕಕಾರಂದೂರು, ಗರ್ಡಾಡಿ, ಪಡಂಗಡಿ, ಕುಕ್ಕೇಡಿ, ನಿಟ್ಟಡೆ, ಮೇಲಂತಬೆಟ್ಟು, ಸವಣಾಲು, ಮುಂಡೂರು, ಶಿರ್ಲಾಲು, ಕರಂಬಾರು, ನಾರಾವಿ, ಕುತ್ಲೂರು, ಸಾವ್ಯ, ಅಂಡಿಂಜೆ, ಕೊಕ್ರಾಡಿ, ಕಾಶಿಪಟ್ನ, ಮರೋಡಿ, ಪೆರಾಡಿ, ಹೊಸಂಗಡಿ, ಬಡಕೋಡಿ, ಆರಂಬೋಡಿ, ಗುಂಡೂರಿ, ಬಜಿರೆ, ಕರಿಮಣೇಲು, ಮೂಡುಕೋಡಿ ಮತ್ತು ವೇಣೂರು.2. ಕಣಿಯೂರು, ಕುವೆಟ್ಟು ಹಾಗೂ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ವ್ಯಾಪ್ತಿಸಮಯ: ಪೂರ್ವಾಹ್ನ 11:00 ಗಂಟೆಗೆಸ್ಥಳ: ಸಂಗಮ ಸಭಾಭವನ, ಲಾಯಿಲಒಳಪಡುವ ಗ್ರಾಮಗಳು: ತಣ್ಣೀರುಪಂಥ, ಬಾರ್ಯ, ಕರಾಯ, ತೆಕ್ಕಾರು, ಪುತ್ತಿಲ, ಬಂದಾರು, ಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕಳಿಯ, ನ್ಯಾಯತರ್ಪು, ಮಚ್ಚಿನ, ಪಾರೆಂಕಿ, ಕುಕ್ಕಳ, ಓಡಿಲ್ನಾಳ, ಸೋಣಂದೂರು, ಮಾಲಾಡಿ, ಕುವೆಟ್ಟು, ಕೊಯ್ಯೂರು ಹಾಗೂ ಬೆಳ್ತಂಗಡಿ ನಗರ ಪ್ರದೇಶಗಳು.3. ಉಜಿರೆ, ಲಾಯಿಲ ಹಾಗೂ ಧರ್ಮಸ್ಥಳ ಮಹಾಶಕ್ತಿ ಕೇಂದ್ರ ವ್ಯಾಪ್ತಿಸಮಯ: ಅಪರಾಹ್ನ 2:00 ಗಂಟೆಗೆಸ್ಥಳ: ಅನುಗ್ರಹ ಸಭಾಭವನ, ಉಜಿರೆಒಳಪಡುವ ಗ್ರಾಮಗಳು: ಲಾಯಿಲ, ನಡ, ಕನ್ಯಾಡಿ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟು, ಕಲ್ಮಂಜ, ಉಜಿರೆ, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕಳೆಂಜ, ನಿಡ್ಲೆ, ಶಿಬಾಜೆ, ಶಿಶಿಲ, ರೆಖ್ಯಾ, ಹತ್ಯಡ್ಕ ಮತ್ತು ಕೊಕ್ಕಡ.ತಾಲೂಕಿನ ಶೈಕ್ಷಣಿಕ ಸಾಧಕರನ್ನು ಪ್ರೋತ್ಸಾಹಿಸುವ ಈ ಸನ್ಮಾನ ಸಮಾರಂಭಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಪ್ರಕಟಣೆಯಲ್ಲಿ ಆದರದ ಆಹ್ವಾನ ನೀಡಿದ್ದಾರೆ.

LEAVE A REPLY

Please enter your comment!
Please enter your name here