ಹೋಲಿ ರಿಡೀಮರ್ ಶಾಲಾ ಸಂಸತ್ತಿಗೆ ಚುನಾವಣೆ

0

ಬೆಳ್ತಂಗಡಿ : ಶಾಲೆಯ ಸುವ್ಯವಸ್ಥಿತ ನಿರ್ವಹಣೆ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜೂನ್ 19ರಂದು ಶಾಲಾ ಸಂಸತ್ತಿಗೆ ಚುನಾವಣೆಯನ್ನು ನಡೆಸಲಾಯಿತು.

ಚುನಾವಣೆಯ ವಿವಿಧ ಹಂತಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರಗಳನ್ನು ಕ್ರಮಪ್ರಕಾರವಾಗಿ ನಡೆಸಲಾಯಿತು. ಮೊಬೈಲ್ ಆಧಾರಿತ ಇವಿಎಂ ಯಂತ್ರವನ್ನು ಬಳಸಿ ಮತದಾನವನ್ನು ನಡೆಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ, ಮತದಾನ ಮಾಡುವ ಕ್ರಮದ ಬಗ್ಗೆ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತದಾನ ಮಾಡಿದರು.

ಶಾಲಾ ನಾಯಕಿಯಾಗಿ ರಿಯೋನ ಸಿಕ್ವೇರಾ, ಶಾಲಾ ಉಪ ನಾಯಕಿಯಾಗಿ ಜಿಯಾ ಲಿಯೋರ ಪಿಂಟೋ ಮತ್ತು ಪ್ರಾಥಮಿಕ ವಿಭಾಗದ ಉಪ ನಾಯಕನಾಗಿ ರೀವನ್ ಸಿಕ್ವೇರಾ ಆಯ್ಕೆಯಾದರು.

LEAVE A REPLY

Please enter your comment!
Please enter your name here