






ಉಜಿರೆ : ಜೂ19 ರಂದು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಉದ್ಘಾಟಕರಾಗಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಉದಯೋನ್ಮುಖ ಪ್ರತಿಭೆ ಕು.ಸಿಂಚನ.ಪಿ ರಾವ್ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.2026-27ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿಗಳ ಸಹಪಠ್ಯ ಚಟುವಟಿಕೆಗಳಾದ ಕೊಳಲು-ವಿದ್ವಾನ್ ಕೃಷ್ಣಗೋಪಾಲ್, ತಬಲ-ವಿದ್ವಾನ್ ವಿವೇಕ್ ಬಾಳಿಗ, ಹಾರ್ಮೋನಿಯಂ-ಶ್ರೀ ಕಮಲಾಕ್ಷ, ಭರತನಾಟ್ಯ-ವಿದುಷಿ ಸುರಕ್ಷಾ, ನಾಟಕ- ಯಶವಂತ್, ವಿಭಿನ್ನ ನೃತ್ಯ ಪ್ರಕಾರಗಳು -ವಿದುಷಿ ಚೈತ್ರ, ಯಕ್ಷಗಾನ- ಅರುಣ್, ಸಂಗೀತ-ವಿದುಷಿ ರಮ್ಯಾ ರಾವ್, ನೃತ್ಯ- ವಿನ್ಯಾಸ್ ಭಂಡಾರಿ, ಕರಾಟೆ-ಮಾಸ್ಟರ್ ವಸಂತ್, ಟೇಬಲ್ ಟೆನ್ನಿಸ್ ಅಶ್ವಿನ್ ಪಡುಕೋಣೆ, ಅಬಾಕಸ್- ಸತೀಶ್ ಹಾಗೂ ಚೆಸ್-ಇಶಾ ಶರ್ಮ ಇವರಿಂದ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಮನಮೋಹನ ನಾಯ್ಕ್ ಕೆ.ಜಿ ವಹಿಸಿದ್ದರು. ಶಿಕ್ಷಕಿ ಸುಜನಾ ವಾಲ್ತಾಜೆ ಸ್ವಾಗತಿಸಿ, ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.









