







ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡವು ಅತ್ಯಂತ ಸಂಕೀರ್ಣವಾದ “ವ್ಯಾಜಿನಲ್ ಹಿಸ್ಟೆರೆಕ್ಟಮಿ” (Vaginal Hysterectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.


ತಾಲೂಕಿನ ಇಂದಬೆಟ್ಟು ನಿವಾಸಿ ಸರಸ್ವತಿ (52) ಎಂಬವರು ಕಳೆದ ಕೆಲವು ಸಮಯದಿಂದ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಯನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆಯ ಅಗತ್ಯತೆಯನ್ನು ಮನಗಂಡು, ಹೊಟ್ಟೆ ಸೀಳದೆ ಮಾಡುವ ಅತ್ಯಾಧುನಿಕ ವಿಧಾನದ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಿದರು.
ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವೆಂಕಟಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ. ರಶ್ಮಿ, ಶಸ್ತ್ರಚಿಕಿತ್ಸಕ ಡಾ. ರಾಘವೇಂದ್ರ ಮತ್ತು ತಂಡದವರು ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು. ಇವರಿಗೆ ಶುಶ್ರೂಷಕಾಧಿಕಾರಿಗಳಾದ ರತ್ನ ಮತ್ತು ಶ್ರೀಮತಿ ಪೂರ್ಣಿಮಾ ಸಾಥ್ ನೀಡಿದರು.









