






ಬೆಳ್ತಂಗಡಿ : ರಾಜೀವ ಗಾಂಧಿ ವಾಣಿಜ್ಯ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಿಂದಾಗಿ ಈಗಾಗಲೇ ಬಹಳ ನಷ್ಟವಾಗಿದ್ದು, ಮಳೆಗಾಲ ಆರಂಭವಾಗುವ ಮೊದಲೇ ಮಳೆ ನೀರು ಸೋರದಂತೆ ಶೀಟ್ ಅಳವಡಿಸಿಕೊಡಬೇಕು ಎಂದು ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ವಾಣೀಜ್ಯ ಸಂಕೀರ್ಣದ ಬಾಡಿಗೆದಾರರು ಮಾ.12ರಂದು ಮನವಿ ಸಲ್ಲಿಸಿದರು.

ಮನವಿಯಲ್ಲಿ ಏನಿದೆ :ವ್ಯಾಪಾರಸ್ಥರು, ಕೈಗೋರಿಕೋದ್ಯಮಿಗಳು, ವ್ಯವಹಾರಸ್ಥರು ಆದ ನಾವು ಹಲವು ವರ್ಷಗಳಿಂದ ಸಂತೆಕಟ್ಟೆಯಲ್ಲಿ ನಗರ ಪಂಚಾಯತ್, ಬೆಳ್ತಂಗಡಿಯವರಿಂದ ನಿರ್ಮಿಸಲ್ಪಟ್ಟ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆದಾರರಾಗಿ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಾ ಬಂದಿರುತ್ತೇವೆ. ನಾವು ವ್ಯವಹಾರ ನಡೆಸುತ್ತಿರುವ ಕಟ್ಟಡದಲ್ಲಿ, ಮಳೆಗಾಲದಲ್ಲಿ ಮಳೆ ನೀರು ಸೋರಿಕೆಯಿಂದಾಗಿ ನಾವು ಬಹಳಷ್ಟು ಕಷ್ಟ ನಷ್ಟಗಳಿಗೆ ಒಳಗಾಗುತ್ತಿದ್ದೇವೆ. ವ್ಯಾಪಾರ ವ್ಯವಹಾರದಲ್ಲಿ ಎಷ್ಟೇ ಕಷ್ಟ ನಷ್ಟಗಳು ಆದರೂ ನಗರ ಪಂಚಾಯತಿಗೆ ಆದರೆ ಪಾವತಿಯಾಗಬೇಕಾದ ಬಾಡಿಗೆಯನ್ನು ಆದಷ್ಟು ಕ್ಲಪ್ತ ಸಮಯದಲ್ಲಿ ತೆರುತ್ತಿದ್ದೇವೆ.


ಮಳೆಗಾಲದಲ್ಲಿ ನೀರಿನ ಸೋರಿಕೆಯಿಂದ ನಾವು ಬಹಳಷ್ಟು ಹಣವನ್ನು ಖರ್ಚು ಮಾಡಿ ಮಾಡಿದ ಇಂಟಿರಿಯರ್, ಫಾಲ್ ಸೀಲಿಂಗ್, ವಿದ್ಯುತ್ ಉಪಕರಣಗಳಿಗೆ ಹಾನಿಯಾಗುತ್ತಿದೆ. ಆದ್ದರಿಂದ ಮಳೆಗಾಲ ಆರಂಭದ ಮೊದಲೇ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಂಡು, ಮಳೆಗಾಲದ ನೀರು ಸೋರಿಕೆಯಾಗದಂತೆ ಸ್ಲಾಬಿನ ಮೇಲೆ ಶೀಟ್ ಅಳವಡಿಸಿದಲ್ಲಿ ಬಹಳಷ್ಟು ಸಮಸ್ಯೆಗಳು ಸರಿಯಾಗಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ, ಶ್ರದ್ಧಾ ಎಂಟರ್‌ಪ್ರೆöÊಸಸ್ ಮಾಲಕ ವಸಂತ್ ಶೆಟ್ಟಿ, ಚಾರ್ಟರ್ಡ್ ಅಕೌಂಟೆAಟ್ ಗಾಯತ್ರಿ ರಾವ್, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐರಿನ್ ಡಿಸೋಜಾ ಹಾಗೂ ಸಿಬ್ಬಂದಿ ರಾಜೇಶ್ ಸಾಲ್ಯಾನ್ ಉಪಸ್ಥಿತರಿದ್ದರು.









