ಕನ್ಯಾಡಿ ಸೇವಾಭಾರತಿಯಿಂದ ಸೌತಡ್ಕ ಸೇವಾಧಾಮದ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

0

ಸೌತಡ್ಕ(ಮಾ.15): ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು.

ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಉಡುಪಿಯ ನಿಹಾಲ್ ವಿಲ್ಸನ್, ಕಾರ್ಕಳದ ಸಂದೀಶ್, ಆತ್ರಾಡಿಯ ರಮೇಶ್ ನಾಯ್ಕ್ ರವರಿಗೆ ನಿವೃತ್ತ ಮಹಿಳಾ ಆರೋಗ್ಯ ಸಂದರ್ಶಕರು ಹಾಗೂ ಸೇವಾಭಾರತಿ POSH ಕಮಿಟಿಯ ಅಧ್ಯಕ್ಷೆ ವಸಂತಿ ಗೌಡ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಹ ಪ್ರಚಾರ ಪ್ರಮುಖ ಗಣೇಶ್ ಕೊಕ್ಕಡ, ಕೊಕ್ಕಡದ ಮಾಳವಿಕ ಅವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here