






ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಸಬಲೀಕರಣ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜೆಸಿ ಹೇಮವತಿ ಕೆ, ಮುಖ್ಯ ಅತಿಥಿಯಾಗಿ ಬ್ಯೂಟಿ ಪಾರ್ಲರ್ ಮಾಲಕಿಯರ ಸಂಘದ ಅಧ್ಯಕ್ಷರಾದ ರಶ್ಮಿತಾ ಆಳ್ವ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಡಿ ಜೆಸಿ ಸಂಯೋಜಕಿ ಜೆಸಿ ಪ್ರತಿಮಾ ಗೌಡ ನಿರ್ವಹಿಸಿದರು.



ವೇದಿಕೆಯಲ್ಲಿ ಘಟಕದ ಅಧ್ಯಕ್ಷ ಜೆಸಿ ಜಿತೇಶ್, ನಿಕಟ ಪೂರ್ವ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ಕಾರ್ಯದರ್ಶಿ ಜೆಸಿ ರಕ್ಷಿತ್ ಅಂಡಿಂಜೆ, ಜೆಜೆಸಿ ಅಧ್ಯಕ್ಷ ಜೆಜೆಸಿ ತೇಜಸ್ ಉಪಸ್ಥಿತರಿದ್ದರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ನಮ್ಮ ಘಟಕದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮನರಂಜನೆ ಕ್ರೀಡೆ ಆಯೋಜಿಸಲಾಹಿತು.
ಕಾರ್ಯಕ್ರಮದಲ್ಲಿ ಜೆಸಿ ಪೂರ್ವಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಜೆಸಿ ಚಿದಾನಂದ ಇಡ್ಯಾ, ಜೆಸಿ ನಾರಾಯಣ ಶೆಟ್ಟಿ,ಜೆಸಿ ರೇಟ್ ಪೂರ್ವಧ್ಯಕ್ಷರಾದ ಜೆಸಿ ಮಮಿತಾ, ಅಮೃತ ಕೋಟ್ಯಾನ್, ಜೆಸಿ ಸದಸ್ಯರಾದ ಜೆಸಿ ಸ್ವಾತಿ, ಜೆಸಿ ಶೈಲೇಶ್, ಜೆಸಿ ಸಮನ್ವಿತ್, ಜೆಸಿ ಸವಿತಾ ಶೆಟ್ಟಿ, ಜೆಸಿ ಪ್ರೀತಿ ರವೀಂದ್ರ, ಜೆಸಿ ಎಲ್ವಿಯಾ, ಭಾಗಹಿಸಿದರು









