






ಬೆಳ್ತಂಗಡಿ: ಸದಾಶಿವ ಶೆಟ್ಟಿ ಕನ್ಯಾನ ಅವರ ದಾನ ಕಾರ್ಯಕ್ರಮಗಳಿಗೆ ಹಿತಿಶ್ರೀ ಎಂಬ ತೀರ್ಮಾನದಿಂದ ಹಿಂದೆ ಸರಿದು, ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳು ಸುಖಾಂತ್ಯ ಕಂಡಿದೆ , ಈ ಬೆಳವಣಿಗೆಯಿಂದ ಸಂತಸ ತಂದಿದೆ ಎಂದು ಸದಾಶಿವ ಶೆಟ್ಟಿ ಅಭಿಮಾನಿ ಸಂಘ ಬೆಳ್ತಂಗಡಿ ಇದರ ಸಂಘಟಕರಾದ ಮಂದರ್ಸ ತಾಳಿಪಾಡಿಗುತ್ತು ಸಂದೀಪ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಮಾರ್ಗದರ್ಶಕರು, ಹಿರಿಯರಾದ ಸದಾಶಿವ ಶೆಟ್ಟಿ ಅವರಿಗೆ ಮುಂದೆಯೂ ಗೌರವ ಸಿಗುವಂತಾಗಲಿ ಮತ್ತು ಅವರ ಈ ತೀರ್ಮಾನ ಹರ್ಷವನ್ನು ತಂದಿದೆ. ಬಡವರಿಗೆ ಮತ್ತು ಧೀನ ದಲಿತರಿಗೆ, ಸಂಘ ಸಂಸ್ಥೆಗಳಿಗೆ ಇನ್ನಷ್ಟು ಸೇವೆ, ಸಹಕಾರ ಸಿಗುವಂತಾಗಲಿ ಎಂದು ತಿಳಿಸಿರುತ್ತಾರೆ.









