ಬೆಳಾಲು ಮಾಯ ದೇವಸ್ಥಾನದ ಜಾತ್ರೆಗೆ ಧ್ವಜಾರೋಹಣ ಮೂಲಕ ಚಾಲನೆ

0

ಬೆಳಾಲು: ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ. 26ರಿಂದ ಮಾ.4ರವರೆಗೆ ಆಲಂಬಾಡಿ ಪದ್ಮನಾಭತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಲಿದ್ದು ಫೆ. 26ರಂದು ಬೆಳಿಗ್ಗೆ ಮಾಯ ಗುತ್ತಿನ ಮನೆಯಲ್ಲಿ ದೈವಗಳಿಗೆ ಕಲಶ ಪರ್ವ ನಡೆಯಿತು.

ಫೆ. 27ರಂದು ಬೆಳಗ್ಗೆ ಗಣಹೋಮ, ಮಾಯ ಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿಯುವುದು, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಬಾಲೆ ಮೊಟ್ಟಿಕಲ್ಲು ಪಾದಪೂಜೆ, ಭಜನೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ ತಂತ್ರಿವರ್ಯರಿಗೆ ಸ್ವಾಗತ, ದೇವಸ್ಥಾನದಲ್ಲಿ ತೋರಣ ಮುಹೂರ್ತ, ಧ್ವಜಾರೋಹಣ ಮೂಲಕ ಜಾತ್ರೆ ಚಾಲನೆ ಗೊಂಡಿತು. ಬಳಿಕ ಉಗ್ರಾಣ ಮುಹೂರ್ತ ಮಹಾ ಪೂಜೆ, ಬಲಿ ಉತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಾಯ, ನಿಂತಿಕಲ್ಲು ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿಧ್ಯ, ಆರಿಕೋಡಿ ಮೆಲೋಡಿಸ್ ಇವರಿಂದ ಭಕ್ತಿ ರಸಮಂಜರಿ, ಬಳಿಕ ಮಾಯ ಶಿವಪ್ರಸಾದ್ ಮತ್ತು ಬಳಗದಿಂದ ಕಿರುನಾಟಕ “ಅಧ್ಯಕ್ಷೆರ್ ಬರೊಂದುಲ್ಲೆರ್” ಪ್ರದರ್ಶನ ಗೊಂಡಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ, ಅನುವಂಶಿಕ ಮೊಕ್ತೇಸರ ಪುಷ್ಪದಂತ ಜೈನ್ ಮಾಯ ಗುತ್ತು, ಮಾಯ ಗುತ್ತು ಅಸ್ರನ್ನ ಗಣೇಶ್ ಬಾರಿತ್ತಾಯ, ಅರ್ಚಕ ಕೇಶವ ರಾಮಾಯಾಜಿ,ಪವಿತ್ರ ಪಾಣಿ ಮೋಹನ ಕೆರ್ಮುಣ್ಣಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಸುರೇಶ್ ಭಟ್ ಪರಂಗಾಜೆ,ರಾಜಪ್ಪ ಗೌಡ ಪುಚ್ಚೆಹಿತ್ಲು, ದಾಮೋದರ ಗೌಡ ಸುರುಳಿ, ದಯಾನಂದ ಪಿ. ಬೆಳಾಲು, ದಿನೇಶ್ ಎಂ. ಕೆ., ವಾರಿಜ ಗುಂಡ್ಯ, ಕವಿತಾ ಉಮೇಶ್ ಮಂಜೊತ್ತು, ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಸುಲೋಚನಾ, ನಿವೃತ್ತಿ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ವಿವಿಧ ಉಪ ಸಮಿತಿಗಳ ಸಂಚಾಲಕರು ಸದಸ್ಯರು, ಸಿಬ್ಬಂದಿ ವರ್ಗ, ವಿಲಯದವರು ಗ್ರಾಮಸ್ಥರು, ಭಕ್ತರು ಹಾಜರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here