ಪಣೆಜಾಲು ರೈತರ ರಬ್ಬರ್ ತೋಟಕ್ಕೆ ಬೆಂಕಿ ಆಪಾರ ನಷ್ಟ: ಕಳಿಯ ಸಿ.ಎ.ಬ್ಯಾಂಕ್ ನೆರವು

0

ಕುವೆಟ್ಟು : ಓಡಿಲ್ನಾಳ ಗ್ರಾಮದ ಪಣೆಜಾಲು ದರ್ಖಾಸು ಲಲಿತಾ ರೈತರೋರ್ವರ ರಬ್ಬರ್ ತೋಟಕ್ಕೆ ಬೆಂಕಿ ತಗುಲಿದ್ದು ಸುಮಾರು 140 ಕ್ಕೂ ಹೆಚ್ಚಿನ ಫಲವತ್ತಾದ ಮರಗಳು ಸುಟ್ಟು ಕೃಷಿಗೆ ಆಪಾರ ಪ್ರಮಾಣದ ನಷ್ಟ ಉಂಟಾಗಿದೆ.ವಿಷಯ ತಿಳಿದು ಫೆ.18 ರಂದು ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ಮಜಲು, ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ,ನಿರ್ದೇಶಕರಾದ ಶೇಖರ ನಾಯ್ಯ,ಕೆ.ಕುಶಾಲಪ್ಪ ಗೌಡ ಸಂತ್ರಸ್ತರ ಮನೆ ಹಾಗೂ ಕೃಷಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾಂತ್ವನ ಹೇಳಿದರು. ಮತ್ತು ಸಹಕಾರ ಸಂಘದ ವತಿಯಿಂದ ಸ್ವಲ್ಪ ಮಟ್ಟಿಗೆ ಧನಸಹಾಯ ನೀಡುವುದಾಗಿ ಭರವಸೆಯನ್ನು ನೀಡಿದರು.

ಹೆಚ್ಚಿನ ಪ್ರಮಾಣದ ನಷ್ಟಕ್ಕೆ ಕಾರಣ:ಬೆಳ್ತಂಗಡಿ ತಾಲೂಕಿನಲ್ಲಿರುವ ಅಗ್ನಿಶಾಮಕ ಠಾಣೆಯ ವಾಹನ ಚಾರ್ಮಾಡಿ ಸಮೀಪದಲ್ಲಿ ಬೆಂಕಿಯನ್ನು ನಂದಿಸಲು ಹೋಗಿತ್ತು. ಇಲ್ಲಿಗೆ ಬರುವಾಗ ತಡವಾಗುವ ಸಾಧ್ಯತೆಯನ್ನು ಕಂಡು ಪುತ್ತೂರಿನ ಅಗ್ನಿಶಾಮಕ ಠಾಣೆಯಿಂದ ವಾಹನ ಬಂದು ನಂದಿಸಿ ಬೆಂಕಿಯನ್ನು ಹತೋಟಿಗೆ ತಂದರು. ಬೆಳ್ತಂಗಡಿ ತಾಲೂಕು ದೊಡ್ಡ ಕ್ಷೇತ್ರವಾಗಿ ಇರುವುದರಿಂದ ಇಲ್ಲಿಗೆ 1 ಅಗ್ನಿಶಾಮಕ ಠಾಣೆಯ ಮೂಲಕ ಬೆಂಕಿಯ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಜನ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆ ಗಮನ ಹರಿಸಲು ಒತ್ತಾಯಿಸಿದರು.

LEAVE A REPLY

Please enter your comment!
Please enter your name here