






ನಡ: ಗ್ರಾಮದ ಕನ್ಯಾಡಿ ಎಂಬಲ್ಲಿ ಜ. 20ರಂದು ಕೇಳ್ತಾಜೆ ಸಮೀಪ ಚಿರತೆ ಕಾಣಿಸಿಕೊಂಡ ಘಟನೆ ನಡೆದಿದೆ. ಇದರ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದು ಇಲಾಖೆಯ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಚಿರತೆ ಓಡಾಟ ಕಂಡ ಪ್ರದೇಶದಲ್ಲಿ ಹಗಲು ರಾತ್ರಿ ಅರಣ್ಯ ಇಲಾಖಾಧಿಕಾರಿಗಳಿಂದ ಚಿರತೆಗಳು ಸಂಚಾರ ಮಾಡುತ್ತಿರುವ ಸ್ಥಳಗಳ ಸುತ್ತ ಗಸ್ತು ನಡೆಸುತ್ತ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಯಾವುದೇ ಸಂದರ್ಭದಲ್ಲಿ ಚಿರತೆ ಅಥವಾ ಬೇರೆ ಇನ್ಯಾವುದೇ ಕಾಡುಪ್ರಾಣಿಗಳು ಮುಖಾಮುಖಿಯಾದಾಗ ಗಾಬರಿಯಾಗದೇ ಗಲಿಬಿಲಿಯಾಗದೇ ಇರಬೇಕು.


ಕತ್ತಲೆಯ ಸಮಯದಲ್ಲಿ ಒಬ್ಬಂಟಿಯಾಗಿ ಯಾರೂ ಕೂಡಾ ಸಂಚರಿಸಬೇಡಿ. ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಅಡಿ ಕಾಡು (ಮುಳಿ ಹುಲ್ಲಿನ ರಾಶಿ ಹಾಗೂ ಕಮ್ಯುನಿಸ್ಟ್ ಬಲ್ಲೆ) ಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಚಿರತೆಯಂತಹ ಕಾಡು ಪ್ರಾಣಿಗಳು ಅಡಗಿ ಕುಳಿತುಕೊಳ್ಳುವುದು ತಪ್ಪಿಸಿದಂತಾಗುತ್ತದೆ. ಚಿರತೆಯನ್ನು ಸೆರೆ ಹಿಡಿಯಲು ಲಭ್ಯ ವಿರುವ ಹಾಗೂ ಬೇರೆ ವಲಯಗಳಿಂದ ತರಿಸಲಾದ ಬೋನುಗಳನ್ನು ಚಿರತೆಗಳು ಸಂಚಾರ ಮಾಡುವ ಸ್ಥಳಗಳಲ್ಲಿ ಇರಿಸಲಾಗಿದೆ. ಯಾವುದೇ ರೀತಿಯ ವದಂತಿಗಳನ್ನು ಹರಡಬೇಡಿ / ನಂಬಬೇಡಿ. ಯಾವುದೇ ರೀತಿಯ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಾಡು ಪ್ರಾಣಿಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕಾಗಿ ಆರ್.ಎಫ್.ಒ. ತ್ಯಾಗರಾಜ್ ಈ ಮೂಲಕ ಕೋರಲಾಗಿದೆ.









