






ಪಟ್ರಮೆ: ನೆಮ್ಮದಿಯ ಬದುಕಿಗಾಗಿ ನಾವು ದೇವಸ್ಥಾನಗಳಿಗೆ ಹೋಗುತ್ತೇವೆ. ದೇಹ ಶುದ್ದಿ ಮತ್ತು ಮನಃ ಶುದ್ದಿಯದಾಗ ಮಾತ್ರ ದೇವರ ಕೃಪೆ ನಮಗೆ ಸಿಗಲು ಸಾಧ್ಯ. ಅನ್ಯ ಕ್ಷೇತ್ರದಲ್ಲಿ ಮಾಡಿದ ಪಾಪಗಳು ಪುಣ್ಯಕ್ಷೇತ್ರ ಭೇಟಿಯಿಂದ ಮುಕ್ತವಾಗುತ್ತವೆ ಆದರೆ ಪುಣ್ಯಕ್ಷೇತ್ರದಲ್ಲಿದ್ದು ಪಾಪ ಕಾರ್ಯಗಳನ್ನು ಮಾಡಿದರೆ ಅದು ವಜ್ರದಂತೆ ಭವಿಷ್ಯವನ್ನು ಕಾಡುತ್ತದೆ ಎಂದು ಶ್ರೀ ಕ್ಷೇತ್ರ ಅನಾರು ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್ ಉಳಿಯಬೀಡು ನುಡಿದರು.


ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿಸ್ವಾರ್ಥ ಸೇವೆಗೆ ಶುಭಫಲ ಇದ್ದೇ ಇರುತ್ತದೆ. ಆರೋಗ್ಯ ಪೂರ್ಣ ಬದುಕಿಗಾಗಿ ದೇವರ ಸೇವೆ ಅವಶ್ಯಕ ಎಂದವರು ಅಭಿಪ್ರಾಯಪಟ್ಟರು.

ದೇವಸ್ಥಾನದಲ್ಲಿ ಸ್ವಚ್ಛತೆಯ ಸೇವೆ ಮಾಡುತ್ತಿದ್ದಂತಹ ಈರಮ್ಮರವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪಟ್ರಮೆ ಪಂಚಾಯತ್ ಅಧ್ಯಕ್ಷ ಮನೋಜ್ ಕುಮಾರ್, ಜಾತ್ರಾ ಸಮಿತಿ ಅಧ್ಯಕ್ಷ ವಿಠಲ ಎಂ. ಕೆ., ಕಾರ್ಯದರ್ಶಿ ಪುರಂದರ ಎಸ್., ಸೇವಾ ಸಮಿತಿ ಅಧ್ಯಕ್ಷ ಹರೀಶ್ ಅಪ್ರೋಡಿ, ಉಪಾಧ್ಯಕ್ಷ ಪದ್ಮನಾಭ, ಕಾರ್ಯದರ್ಶಿ ಶರತ್ಚಂದ್ರ ಉಪಸ್ಥಿತರಿದ್ದರು.









